ಇಂದು ಆಸ್ಟ್ರೇಲಿಯಾ-ದ.ಆಫ್ರಿಕಾ ಕದನ: ಎಂಟನೇ ಫೈನಲ್ ನಿರೀಕ್ಷೆಯಲ್ಲಿ ಹಾಲಿ ಚಾಂಪಿಯನ್ಸ್

New-Project-1-1-1
Published on

ದುಬೈ: ಸತತ 15 ಪಂದ್ಯಗಳಲ್ಲಿ ಗೆಲುವಿನ ಓಟ ಮುಂದುವರಿಸಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸೆಮಿೈನಲ್‌ನಲ್ಲಿ ಗುರುವಾರ ದಕ್ಷಿಣ ಆಫ್ರಿಕಾ ಸವಾಲು ಎದುರಿಸಲಿದೆ. ಇದು 2023ರ ಆವೃತ್ತಿಯ ಫೈನಲ್‌ನ ಮರುಪಂದ್ಯ ಎನಿಸಿದ್ದು, ಆಸೀಸ್ ತಂಡ ದಾಖಲೆಯ ಎಂಟನೇ ಬಾರಿಗೆ ಪ್ರಶಸ್ತಿ ಸುತ್ತಿಗೇರುವ ತವಕದಲ್ಲಿದೆ.

ಆಸೀಸ್ ಸತತ 9ನೇ ಆವೃತ್ತಿಯಲ್ಲೂ ಉಪಾಂತ್ಯಕ್ಕೇರಿದೆ. ಕಳೆದ ಆವೃತ್ತಿಯ ೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 19 ರನ್‌ಗಳಿಂದ ಮಣಿಸಿ ಆಸೀಸ್ 6ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಕಳೆದ ಬಾರಿ ಕೈ ಜಾರಿದ್ದ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವ ಹಂಬಲದಲ್ಲಿರುವ ಆಫ್ರಿಕಾ ಸತತ 2ನೇ ೈನಲ್‌ನ ನಿರೀಕ್ಷೆಯಲ್ಲಿದೆ. ಹಾಲಿ ಟೂರ್ನಿಯಲ್ಲಿ ಅಜೇಯವಾಗಿರುವ ಆಸೀಸ್ ಎ ಗುಂಪಿನ ಅಗ್ರಸ್ಥಾನಿಯಾಗಿ ಸೆಮೀಸ್‌ಗೇರಿದ್ದು, ಆಫ್ರಿಕಾ ಬಿ ಗುಂಪಿನಲ್ಲಿ ಮೂರು ಗೆಲುವಿನೊಂದಿಗೆ ನಾಕೌಟ್‌ಗೇರಿದೆ. ಇತ್ತಂಡಗಳ ಕಳೆದ 10 ಕಾದಾಟಗಳಲ್ಲಿ ಆಸ್ಟ್ರೇಲಿಯಾ 9 ಬಾರಿ ಗೆದ್ದು ಮೇಲುಗೈ ಸಾಧಿಸಿದ್ದು, ಜತೆಗೆ ವಿಶ್ವಕಪ್‌ನ 7 ಪೈಪೋಟಿಯಲ್ಲೂ ಅಜೇಯವಾಗಿ ಉಳಿದಿದೆ.

ಜತೆಗೆ ಕಳೆದ ಬಾರಿ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ನಾಯಕಿ ಅಲಿಸ್ಸಾ ಹೀಲಿ, ಬೆತ್ ಮೂನಿ, ಎಲ್ಲಿಸ್ ಪೆರ‌್ರಿ, ಮೇಗನ್ ಶುಟ್, ಆಶ್ಲೇ ಗಾರ್ಡನರ್ ಈ ಬಾರಿಯೂ ತಂಡದಲ್ಲಿರುವ ಪ್ರಮುಖರು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಮತೋಲಿತವಾಗಿರುವ ಆಸ್ಟ್ರೇಲಿಯಾವೇ ಗೆಲುವಿನ ೇವರಿಟ್ ಎನಿಸಿದೆ. ಹಾಲಿ ಆವೃತ್ತಿಯಲ್ಲಿ ಲಯದಲ್ಲಿರುವ ದ.ಆಫ್ರಿಕಾಕ್ಕೆ ನಾಯಕಿ ಲೌರಾ ವೋಲ್ವಾರ್ಡ್, ಅನುಭವಿ ಆಲ್ರೌಂಡರ್ ಮಾರಿಜಾನ್ನೆ ಕಾಪ್, ತಂಜಿಮ್ ಬ್ರಿಟ್ಸ್ ಬಲ ತುಂಬಲಿದ್ದಾರೆ. ಯುಎಇಯ ಪಿಚ್‌ನಲ್ಲಿ ನಿಧಾನಗತಿಯ ಎಡಗೈ ಸ್ಪಿನ್ನರ್ ನಾನ್‌ಕುಲುಲೆಕೊ ಮ್ಲಾಬಾ ಪ್ರಮುಖ ಆಟಗಾರ್ತಿ ಎನಿಸಿದ್ದಾರೆ. ಇದುವರೆಗೆ ನಾಲ್ಕು ಲೀಗ್ ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ. ದ.ಆಫ್ರಿಕಾ ಚೊಚ್ಚಲ ಟಿ20 ವಿಶ್ವಕಪ್‌ನ ನಿರೀಕ್ಷೆಯಲ್ಲಿ ಕಣಕ್ಕಿಳಿಯಲಿದ್ದು, ಪುರುಷರ ತಂಡದ ನಿರಾಸೆಯನ್ನು ಮರೆಮಾಚುವ ಹಂಬಲದಲ್ಲಿದೆ.

ಮುಖಾಮುಖಿ: 10

ಆಸ್ಟ್ರೇಲಿಯಾ: 9

ದ.ಆಫ್ರಿಕಾ: 1

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net