

ಕಟಕ್: ಮುಂಬರುವ ಮಹಿಳೆಯರ ಟಿ20 ವಿಶ್ವಕಪ್ಗೆ ಪೂರ್ವಭಾವಿಯಾಗಿ ಭಾರತ ತಂಡಕ್ಕೆ ಆಯ್ಕೆ ಟ್ರಯಲ್ಸ್ ರೂಪದಲ್ಲಿ ಮಹಿಳೆಯರ ಟಿ20 ಚಾಲೆಂಜರ್ ಟ್ರೋಫಿ ಶನಿವಾರದಿಂದ ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯಲಿದೆ. 3 ತಂಡಗಳ ಟೂರ್ನಿಯಲ್ಲಿ ಭಾರತ ಟಿ20 ತಂಡದ ನಾಯಕಿ ಹರ್ವನ್ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂದನಾ ಮತ್ತು ಕನ್ನಡತಿ ವೇದಾ ಕೃಷ್ಣಮೂರ್ತಿ ಕ್ರಮವಾಗಿ ಭಾರತ ಎ, ಬಿ ಮತ್ತು ಸಿ ತಂಡಗಳನ್ನು ಮುನ್ನಡೆಸಲಿದ್ದಾರೆ. ಕನ್ನಡತಿರಾದ ವಿಆರ್ ವನಿತಾ ಭಾರತ ಬಿ ಮತ್ತು ರಾಜೇಶ್ವರಿ ಗಾಯಕ್ವಾಡ್ ಭಾರತ ಸಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರಾಷ್ಟ್ರೀಯ ತಂಡದ ಪ್ರಮುಖ ಆಟಗಾರ್ತಿಯರಾದ ಜೆಮೀಮಾ ರೋಡ್ರಿಗಸ್, ಸುಷ್ಮಾ ವರ್ಮ, ಅನುಜಾ ಪಾಟೀಲ್, ಪೂನಂ ಯಾದವ್, ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್ ಕೂಡ ಈ ತಂಡದಲ್ಲಿದ್ದಾರೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ಎ ಮತ್ತು ಬಿ ತಂಡಗಳು ಮುಖಾಮುಖಿಯಾಗಲಿವೆ. ಡಬಲ್ ರೌಂಡ್ ರಾಬಿನ್ ಲೀಗ್ ಬಳಿಕ ಅಗ್ರ 2 ತಂಡಗಳ ನಡುವೆ ಜನವರಿ 10ರಂದು ಫೈನಲ್ ಪಂದ್ಯ ನಡೆಯಲಿದೆ. ಎಲ್ಲ ಪಂದ್ಯಗಳು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿವೆ. 2018ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಮೊದಲ ಆವೃತ್ತಿಯ ಟೂರ್ನಿಯಲ್ಲಿ ಇಂಡಿಯಾ ಬ್ಲೂ ತಂಡ ಚಾಂಪಿಯನ್ ಆಗಿತ್ತು. ಇಂಡಿಯಾ ರೆಡ್ ಮತ್ತು ಗ್ರೀನ್ ಮತ್ತೆರಡು ತಂಡಗಳಾಗಿದ್ದವು. ಆದರೆ ಈ ಬಾರಿ ತಂಡಗಳ ಹೆಸರನ್ನು ಎ, ಬಿ, ಸಿ ಎಂದು ಬದಲಾಯಿಸಲಾಗಿದೆ.
ಭಾರತ ಎ: ಹರ್ವನ್ಪ್ರೀತ್ ಕೌರ್ (ನಾಯಕಿ), ತಾನಿಯಾ ಭಾಟಿಯಾ, ಶಿವಾಲಿ ಶಿಂಧೆ, ಜಸಿಯಾ ಅಖ್ತರ್, ಪ್ರಿಯಾ ಪೂನಿಯಾ, ದೀಪ್ತಿ ಶರ್ಮ, ದೇವಿಕಾ ವೈದ್ಯ, ಸ್ನೇಹ ರಾಣಾ, ಮಾನ್ಸಿ ಜೋಷಿ, ಮೇಘನಾ ಸಿಂಗ್, ಕೋಮಲ್ ಜಾಂಜ್ಹಾದ್, ಮೀನು ಮಣಿ, ರಾಧಾ ಯಾದವ್, ಭಾರತಿ ಫುಲ್ಮಾಲಿ. ಭಾರತ ಬಿ: ಸ್ಮೃತಿ ಮಂದನಾ (ನಾಯಕಿ), ಸುಷ್ಮಾ ವರ್ಮ, ಆರ್.ಕಲ್ಪನಾ, ವನಿತಾ ವಿಆರ್, ಜಮೀಮಾ, ಅನುಜಾ ಪಾಟೀಲ್, ಪೂನಂ ಯಾದವ್, ಪೂಜಾ ವಸ್ತ್ರಾಕರ್, ಶಿಖಾ ಪಾಂಡೆ, ರೇಣುಕಾ ಸಿಂಗ್, ಅಂಜಲಿ ಸರ್ವಾನಿ, ಸುಶ್ರಿ ದಿವ್ಯದರ್ಶಿನಿ, ಟಿಪಿ
ಕನ್ವರ್, ರಿಚಾ ಘೋಷ್. ಭಾರತ ಸಿ: ವೇದಾ (ನಾಯಕಿ), ನುಜಾತ್ ಪರ್ವೀನ್, ಶೆಫಾಲಿ ವರ್ಮ, ಯಶ್ಕಿತಾ ಭಾಟಿಯಾ, ಡಿ.ಹೇಮಲತಾ, ಹರ್ಲಿನ್ ಡಿಯೊಲ್, ಮನಾಲಿ ದಕ್ಷಿಣಿ, ಜಿನ್ಸಿ ಜಾರ್ಜ್, ಅರುಂಧತಿ ರೆಡ್ಡಿ, ಮೋನಿಕಾ ಪಟೇಲ್, ವೃಶಾಲಿ ಭಗತ್, ರಾಜೇಶ್ವರಿ ಗಾಯಕ್ವಾಡ್, ತನುಶ್ರೀ ಸರ್ಕಾರ್, ಮಾಧುರಿ ಮೆಹ್ತಾ. -ಏಜೆನ್ಸೀಸ್
ಟೂರ್ನಿ ವೇಳಾಪಟ್ಟಿ
ಜ.4: ಭಾರತ ಎ-ಬಿ
ಜ.5: ಭಾರತ ಬಿ-ಸಿ
ಜ. 6: ಭಾರತ ಸಿ-ಎ
ಜ. 7: ಭಾರತ ಬಿ-ಎ
ಜ. 8: ಭಾರತ ಸಿ-ಬಿ
ಜ.9: ಭಾರತ ಎ-ಸಿ
ಜ.10: ಫೈನಲ್
ಆರಂಭ: ಬೆಳಗ್ಗೆ 11