ಭಾರತ ದಾಖಲೆಯ ಚೇಸಿಂಗ್; ಫೈನಲ್ ಆಸೆ ಜೀವಂತವಿರಿಸಿಕೊಂಡ ಮಹಿಳಾ ತಂಡ

SHEFALI
Published on

ಮೆಲ್ಬೋರ್ನ್: ಆರಂಭಿಕ ಬ್ಯಾಟುಗಾರ್ತಿ ಯರಾದ ಶಫಾಲಿ ವರ್ಮ (49ರನ್, 28 ಎಸೆತ, 8 ಬೌಂಡರಿ, 1 ಸಿಕ್ಸರ್) ಹಾಗೂ ಸ್ಮೃತಿ ಮಂದನಾ (55ರನ್, 48 ಎಸೆತ, 7 ಬೌಂಡರಿ) ಜೋಡಿಯ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಮಹಿಳಾ ತಂಡ ತ್ರಿಕೋನ ಟಿ20 ಸರಣಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 7 ವಿಕೆಟ್ ಜಯ ದಾಖಲಿಸಿತು. ಇದರಿಂದ ಲೀಗ್​ನಲ್ಲಿ 2ನೇ ಜಯ ದಾಖಲಿಸಿದ ಭಾರತ ಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.

ಜಂಕ್ಷನ್ ಓವೆಲ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ, ಆಶ್ಲೆಗ್ ಗಾರ್ಡ್​ನರ್ (93ರನ್, 57ಎಸೆತ, 11ಬೌಂಡರಿ, 3ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್​ಗೆ 173 ರನ್ ಕಲೆಹಾಕಿದರೆ, ಪ್ರತಿಯಾಗಿ ಶಫಾಲಿ ವರ್ಮ ಹಾಗೂ ಸ್ಮೃತಿ ಮಂದನಾ ಜೋಡಿ ಮೊದಲ ವಿಕೆಟ್​ಗೆ 50 ಎಸೆತಗಳಲ್ಲಿ 85 ರನ್ ಪೇರಿಸಿದ ಫಲವಾಗಿ ಭಾರತ 19.4 ಓವರ್​ಗಳಲ್ಲಿ 3 ವಿಕೆಟ್​ಗೆ 177 ರನ್ ಪೇರಿಸಿ ಜಯ ದಾಖಲಿಸಿತು.

ಆಸ್ಟ್ರೇಲಿಯಾ: 5 ವಿಕೆಟ್​ಗೆ 173 (ಗಾರ್ಡ್​ನರ್ 93, ಲ್ಯಾನಿಂಗ್ 37, ದೀಪ್ತಿ ಶರ್ಮ 27ಕ್ಕೆ 2), ಭಾರತ: 19.4 ಓವರ್​ಗಳಲ್ಲಿ 3 ವಿಕೆಟ್​ಗೆ 177 (ಶಫಾಲಿ 49, ಸ್ಮೃತಿ 55, ಜೇಮಿಮಾ 30, ಹರ್ವನ್​ಪ್ರೀತ್ ಕೌರ್ 20*).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net