ಬೆಂಗಳೂರು ಸಹಿತ ದೇಶದ 4 ನಗರಗಳಲ್ಲಿ ಮಹಿಳೆಯರ ಐಪಿಎಲ್​ ಆಯೋಜನೆ!

wpl web (2)
Published on

ಮುಂಬೈ: ಮುಂಬರುವ ಮೂರನೇ ಆವೃತ್ತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ (ಡಬ್ಲ್ಯುಪಿಎಲ್​) ಮಹಿಳಾ ಟಿ20 ಟೂರ್ನಿಯನ್ನು ನಾಲ್ಕು ನಗರಗಳಾದ ಬೆಂಗಳೂರು, ವಡೋದರ, ಮುಂಬೈ ಮತ್ತು ಲಖನೌದಲ್ಲಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಫೆಬ್ರವರಿ ಮೊದಲ ವಾರದಲ್ಲಿ ಟೂರ್ನಿ ಶುರುವಾಗಲಿದೆ.

ಮುಂಬೈ ನಗರದಲ್ಲಿನ ಪಂದ್ಯಗಳು ಬ್ರಬೋರ್ನ್​ ಸ್ಟೇಡಿಯಂನಲ್ಲಿ ನಡೆಯಲಿವೆ. ವಡೋದರದ ನೂತನ ಕೋಟಂಬಿ ಸ್ಟೇಡಿಯಂನಲ್ಲಿ ಮಾರ್ಚ್​ನಲ್ಲಿ ಫೈನಲ್​ ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್​ ಶುಕ್ಲಾ ತಿಳಿಸಿದರು. 2023ರ ಮೊದಲ ಆವೃತ್ತಿ ಮುಂಬೈನಲ್ಲಷ್ಟೇ ನಡೆದಿದ್ದರೆ, ಕಳೆದ ವರ್ಷದ ಡಬ್ಲ್ಯುಪಿಎಲ್​ ಪಂದ್ಯಗಳು ಬೆಂಗಳೂರು-ದೆಹಲಿಯಲ್ಲಿ ಮಾತ್ರ ನಡೆದಿದ್ದವು. ಈ ಬಾರಿ ಟೂರ್ನಿಯನ್ನು 4 ನಗರಗಳಿಗೆ ವಿಸ್ತರಿಸಲಾಗಿದೆ.

ಈ ಬಾರಿ ಲಖನೌ, ವಡೋದರದಲ್ಲಿ ಮಾತ್ರ ಡಬ್ಲ್ಯುಪಿಎಲ್​ ನಡೆಸಲು ಮೊದಲಿಗೆ ನಿರ್ಧರಿಸಿದ್ದರೂ, ಮುಂಬೈ, ಬೆಂಗಳೂರಿನಲ್ಲಿನ ಉತ್ಸಾಹಿ ಕ್ರಿಕೆಟ್​ ಪ್ರೇಮಿಗಳನ್ನು ಗಮನದಲ್ಲಿಟ್ಟುಕೊಂಡು ಇವೆರಡು ಮೆಟ್ರೋ ನಗರಗಳಲ್ಲೂ ಪಂದ್ಯಗಳನ್ನು ನಡೆಸಲು ಭಾನುವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net