Women's Asia Cup T20: ಪಾಕಿಸ್ತಾನ ವಿರುದ್ಧ ಭಾರತಕ್ಕೆ 7 ವಿಕೆಟ್​ಗಳ ಭರ್ಜರಿ ಜಯ

simi
Published on

ಶ್ರೀಲಂಕಾ: ಶ್ರೀಲಂಕಾದ ದಾಂಬುಲ್ಲಾದ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ 2024ರ ಮಹಿಳಾ ಏಷ್ಯಾಕಪ್‌ ಟೂರ್ನಿಯ ಎ ಗುಂಪಿನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ವನಿತೆಯರು 7 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ.

ಭಾರತದ ಶಿಸ್ತಿನ ಬೌಲಿಂಗ್ ದಾಳಿಗೆ ಪಾಕಿಸ್ತಾನ ತಂಡ 19.2 ಓವರ್​ಗಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 108 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಪಾಕ್ ನೀಡಿದ 109 ರನ್‌ಗಳ‌ ಗುರಿ ಬೆನ್ನು ಹತ್ತಿದ ಭಾರತ ವನಿತೆಯರು ಸ್ಮೃತಿ ಮಂಧಾನ (45) ಹಾಗೂ ಶಫಾಲಿ ವರ್ಮಾ (40) ಅಬ್ಬರದ ಬ್ಯಾಟಿಂಗ್‌ ಪ್ರದರ್ಶನದಿಂದ ಕೇವಲ 14.1 ಓವರ್​ಗಳಲ್ಲಿ 109 ರನ್​ ಗಳಿಸಿ ಪಾಕಿಸ್ತಾನ ವಿರುದ್ಧ ಜಯಭೇರಿ ಬಾರಿಸಿದರು.

ಈ ಮೂಲಕ ಟೀಮ್‌ ಇಂಡಿಯಾ ಮಹಿಳಾ ಏಷ್ಯಾಕಪ್‌ 2024ರಲ್ಲಿ ಮೊದಲು ಗೆಲುವು ಸಾಧಿಸಿದೆ. ಮಹಿಳಾ ಏಷ್ಯಾಕಪ್‌ ಇತಿಹಾಸದಲ್ಲಿ ಪಾಕಿಸ್ತಾನ ವಿರುದ್ಧ ಆಡಿರುವ 7 ಪಂದ್ಯದಲ್ಲಿ 6 ರಲ್ಲಿ ಜಯಗಳಿಸಿ ಹರ್ಮನ್‌ಪ್ರೀತ್‌ ಕೌರ್‌ ಪಡೆ ಗೆದ್ದು ಬೀಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net