ಮಹಿಳೆಯರ ಟಿ20 ವಿಶ್ವಕಪ್​ಗೆ ದಿನಗಣನೆ

Women T20
Published on

ಸಿಡ್ನಿ: ಆಸ್ಟ್ರೇಲಿಯಾ ಆತಿಥ್ಯದಲ್ಲಿ ಶುಕ್ರವಾರದಿಂದ ನಡೆಯಲಿರುವ ಮಹಿಳೆಯರ ಟಿ20 ವಿಶ್ವಕಪ್​ಗೆ ದಿನಗಣನೆ ಆರಂಭಗೊಂಡಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 10 ತಂಡಗಳ ನಾಯಕಿಯರು ಸೋಮವಾರ ಸಿಡ್ನಿಯಲ್ಲಿ ಟ್ರೋಫಿಯೊಂದಿಗೆ ಪೋಸ್ ನೀಡಿದರು.

ಇದೇ ವೇಳೆ ಮಾತನಾಡಿದ ಭಾರತ ತಂಡದ ನಾಯಕಿ ಹರ್ವನ್​ಪ್ರೀತ್ ಕೌರ್, ‘ವಿಶ್ವಕಪ್ ಗೆದ್ದರೆ ಭಾರತದ ಮಹಿಳಾ ಕ್ರಿಕೆಟ್​ಗೆ ಅದೊಂದು ದೊಡ್ಡ ಬಲ ತುಂಬಲಿದೆ’ ಎಂದಿದ್ದಾರೆ. 2017ರ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಭಾರತ ತಂಡ ಎಡವಿದ್ದರೂ, ಆ ಟೂರ್ನಿಯ ಬಳಿಕ ಮಹಿಳಾ ತಂಡಕ್ಕೆ ದೊರೆತ ಬೆಂಬಲ ಅಮೋಘವಾಗಿತ್ತು. ಅದೊಂದು ದೊಡ್ಡ ಅಚ್ಚರಿಯಾಗಿತ್ತು. ಅಂದಿನಿಂದ ಪ್ರತಿದಿನ ನಮ್ಮ ತಂಡ ಬೆಳವಣಿಗೆ ಕಾಣುತ್ತಿದೆ. ಈ ಬಾರಿ ವಿಶ್ವಕಪ್ ಗೆಲ್ಲಲೂ ಶ್ರೇಷ್ಠ ನಿರ್ವಹಣೆ ತೋರಲಿದ್ದೇವೆ’ ಎಂದು ಹರ್ವನ್​ಪ್ರೀತ್ ಹೇಳಿದ್ದಾರೆ. ಭಾರತ ತಂಡ ಅಡಿಲೇಡ್​ನಲ್ಲಿ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net