

ಕ್ಯಾನ್ಬೆರಾ: ಮುಂದಿನ ತಿಂಗಳು ಆರಂಭವಾಗಲಿರುವ ಮಹಿಳೆಯರ ಟಿ20 ವಿಶ್ವಕಪ್ಗೆ ಪೂರ್ವಭಾವಿಯಾಗಿ ಭಾರತ, ಇಂಗ್ಲೆಂಡ್ ಮತ್ತು ಆತಿಥೇಯ ಆಸ್ಟ್ರೇಲಿಯಾ ಒಳಗೊಂಡ ತ್ರಿಕೋನ ಸರಣಿ ಶುಕ್ರವಾರದಿಂದ ನಡೆಯಲಿದೆ.
ಮೊದಲ ಹಣಾಹಣಿಯಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. 2017ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಇಂಗ್ಲೆಂಡ್ ಎದುರು ಕೇವಲ 9 ರನ್ನಿಂದ ಭಾರತ ತಂಡ ಸೋಲನುಭವಿಸಿತ್ತು.
ಇದೀಗ ಇಂಗ್ಲೆಂಡ್ ವಿರುದ್ಧವೇ ಟಿ20 ವಿಶ್ವಕಪ್ಗೆ ಪೂರ್ವಭ್ಯಾಸ ಕೈಗೊಳ್ಳುವ ಅವಕಾಶ ಲಭಿಸಿದೆ. ಲೀಗ್ನಲ್ಲಿ ಡಬಲ್ ರೌಂಡ್ ರಾಬಿನ್ ಬಳಿಕ ಫೆ. 12ರಂದು ಮೆಲ್ಬೋರ್ನ್ನಲ್ಲಿ ಫೈನಲ್ ನಡೆಯಲಿದೆ. ಫೆ.21ರಿಂದ ಮಾರ್ಚ್ 8ರವರೆಗೆ ಟಿ20 ವಿಶ್ವಕಪ್ ನಡೆಯಲಿದೆ.