

ನವದೆಹಲಿ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾರ್ಚ್ 22ರಿಂದ ಪ್ರಾರಂಭವಾಗಿದ್ದು, ಅಂದಿನಿಂದ ದೇಶಾದ್ಯಂತ ಕ್ರಿಕೆಟ್ ಅಭಿಮಾನಿಗಳು ಟಿವಿ ಹಾಗೂ ಮೊಬೈಲ್ ಪರದೆಗಳಿಗೆ ಅಂಟಿಕೊಂಡಿದ್ದಾರೆ. ಥ್ರಿಲ್‌ಗಾಗಿ ಮತ್ತು ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ನೋಡುವ ಆಸೆಯಿಂದ ಅನೇಕರು ಟಿಕೆಟ್‌ಗಳನ್ನು ಬುಕ್ ಮಾಡಿ ಪಂದ್ಯಗಳಲ್ಲಿ ನೇರವಾಗಿ ಕಣ್ತುಂಬಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಕಟ್ಟಾ ಅಭಿಮಾನಿಯಾಗಿರುವ ಮಹಿಳೆಯೊಬ್ಬರು ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಲು ತೆರಳಿದ್ದರು. ಆದರೆ, ಆಫೀಸ್ನಿಂದ ಹೊರಡುವಾಗ, ತಮ್ಮ ಕುಟುಂಬದಲ್ಲಿ ಎಮರ್ಜೆನ್ಸಿ ಇದೆ ಎಂದು ಬಾಸ್ಗೆ ಸುಳ್ಳು ಹೇಳಿ ಹೋಗಿದ್ದರು. ಆದರೆ, ನೇರ ಪ್ರಸಾರದ ವೇಳೆ ಟಿವಿ ಪರದೆಯಲ್ಲಿ ಬಾಸ್ ಕಣ್ಣಿಗೆ ಆಕೆ ಸಿಕ್ಕಿಬಿದ್ದಿದ್ದಾಳೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯವನ್ನು ಕ್ರೀಡಾಂಗಣದಲ್ಲಿ ವೀಕ್ಷಿಸಲು ಹೋದಾಗ ತನ್ನ ಬಾಸ್ ತನ್ನನ್ನು ಟಿವಿಯಲ್ಲಿ ನೋಡಿದ್ದಾರೆ ಎಂದು ಮಹಿಳೆ ತಮ್ಮ ಇನ್ಸ್ಟಾಗ್ರಾಂ ವಿಡಿಯೋದಲ್ಲಿ ಹೇಳಿದ್ದಾರೆ. ಟಿವಿ ಪರದೆಯಲ್ಲಿ ಸಿಕ್ಕಿಬಿದ್ದ ಬಳಿಕ ಅವರ ಬಾಸ್, ದ್ವಿವೇದಿ ಬಳಿ ಬೆಂಗಳೂರು ತಂಡದ ಮೇಲಿನ ಅಭಿಮಾನದ ಬಗ್ಗೆ ವಿಚಾರಿಸಿದರು. ಅಲ್ಲದೆ, ಪಂದ್ಯವನ್ನು ವೀಕ್ಷಿಸಿ ನಿರಾಶೆಗೊಳ್ಳಬೇಕಾಯಿತು ಎಂದು ಟೀಕಿಸಿದರು. ಏಕೆಂದರೆ, ಆರ್ಸಿಬಿ ಆ ಪಂದ್ಯವನ್ನು ಸೋತಿತು. ಇದೇ ವೇಳೆ ದ್ವಿವೇದಿ ಬಹುಬೇಗನೇ ಲಾಗ್‌ಔಟ್ ಆಗಿದ್ದರ ಬಗ್ಗೆ ತಮಾಷೆ ಮಾಡಿದರು. ಇನ್ಸ್ಟಾಗ್ರಾಂನಲ್ಲಿ ಬಾಸ್ ಕಳುಹಿಸಿದ ಸಂದೇಶವನ್ನು ದ್ವಿವೇದಿ ಹಂಚಿಕೊಂಡಿದ್ದಾರೆ. ನಾನು ನಿನ್ನನ್ನು ಒಂದು ಸೆಕೆಂಡ್ ಮಾತ್ರ ನೋಡಿದೆ ಮತ್ತು ಗುರುತಿಸಿದೆ. ಇದು ನಿನ್ನೆಯ ಆರಂಭಿಕ ಲಾಗ್‌ಔಟ್‌ಗೆ ಕಾರಣವಾಗಿತ್ತು ಎಂದು ಕಿಚಾಯಿಸಿದ್ದಾರೆ.
ಈ ವಿಡಿಯೋಗೆ ದ್ವಿವೇದಿ ಅವರು ಮೋಯೆ ಮೋಯೆ ದಿನದಿಂದ ದಿನಕ್ಕೆ ನಿಜವಾಗುತ್ತಿದೆ ಎಂಬ ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟ್ ಅನ್ನು ಇನ್ಸ್ಟಾಂಗ್ರಾಂನಲ್ಲಿ ಹಂಚಿಕೊಂಡ ಬಳಿಕ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ನಾಲ್ಕು ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಸ್ಟೇಡಿಯಂನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಕ್ಯಾಮೆರಾಮ್ಯಾನ್ ನಮ್ಮನ್ನು ಪೋಕಸ್ ಮಾಡಲಿ ಎಂದು ಬಯಸುತ್ತಾರೆ. ಆದರೆ, ಕೆಲವರಿಗೆ ಅವಕಾಶವೇ ಸಿಗುವುದಿಲ್ಲ. ಆದರೆ, ನಿಮಗೆ ಸುಲಭವಾಗಿ ದೊರಕಿದೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈಕೆಯನ್ನು ಕೆಲಸದಿಂದ ತೆಗೆಯಬೇಕು. ಏಕೆಂದರೆ, ಮೊದಲು ಆಫೀಸ್‌ನಲ್ಲಿ ಸುಳ್ಳು ಹೇಳಿ ಆಮೇಲೆ ಆಫೀಸ್ ಪರ್ಸನಲ್ ಚಾಟ್ ಅನ್ನು ಹಂಚಿಕೊಂಡಿದ್ದಾರೆ ಎಂದು ಮತ್ತೊಬ್ಬ ನೆಟ್ಟಿಗ ಗರಂ ಆಗಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಇದನ್ನು ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್)