

ಅಹಮದಾಬಾದ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ೈನಲ್ ಪಂದ್ಯಕ್ಕೂ ಮುನ್ನ ಭಾರತೀಯ ವಾಯುಸೇನೆಯ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ ವಿಶೇಷ ಏರ್‌ಶೋ ನಡೆಸಿಕೊಟ್ಟಿತು. ಕ್ರಿಕೆಟ್ ಪಂದ್ಯದ ವೇಳೆ ಇದೇ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭಾರತೀಯ ವಾಯುಪಡೆಯ 52ನೇ ಬ್ಯಾಚ್‌ನ ಭಾಗವಾಗಿರುವ ಸೂರ್ಯಕಿರಣ್ ತಂಡ ಹಾವಕ್-132 ಎಸ್‌ಕೆಎಟಿನ ಏರ್ ಕ್ರ್‌ಟಾಗಳ ಪೈಲಟ್‌ಗಳು 1,30 ಲಕ್ಷಕ್ಕೂ ಅಧಿಕ ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಾಸ್‌ಗೆ ಮೊದಲು 15 ನಿಮಿಷಗಳ ಕಾಲ ವೈಮಾನಿಕ ಪ್ರದರ್ಶನ ನೀಡಿದವು.
ಇನಿಂಗ್ಸ್ ವಿರಾಮದಲ್ಲಿ ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಹಾಗೂ ವಿಶ್ವಕಪ್‌ನ ಧ್ಯೇಯ ಗೀತೆ ಸಂಯೋಜಕ ಪ್ರೀತಮ್ ಚಕ್ರವರ್ತಿ, ಜೋನಿತಾ ಗಾಂಧಿ, ನಕಾಶ್ ಅಜೀಜ್, ಅಮಿತ್ ಮಿಶ್ರಾ ಹಾಗೂ ತುಷಾರ್ ಜೋಷಿ ತಂಡ ಸಂಗೀತ ಸುಧೆ ಜತೆಗೆ ಲೇಸರ್-ಲೈಟ್ ಶೋ ಆಯೋಜಿಸಲಾಯಿತು.