ಭಾರತದ ಬೌಲರ್‌ಗಳ ಬೆವರಿಳಿಸಿದ ಶಾಯ್ ಹೋಪ್! ಕೊನೆಯ ಪಂದ್ಯದಲ್ಲಿ ವಿಂಡೀಸ್‌ಗೆ ಭರ್ಜರಿ ಜಯ; ಸರಣಿ ಗೆದ್ದ ಟೀಮ್​ ಇಂಡಿಯಾ! West Indies Wins

ಮುಲ್ಲನ್‌ಪುರದಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಸೋಲು. ಶಾಯ್ ಹೋಪ್ ಅಜೇಯ ಶತಕದ ಆಟ; ರೋಹಿತ್-ರಾಹುಲ್ ಅರ್ಧಶತಕ ಹಾಗೂ ಶತಕದ ನಡುವೆಯೂ ಭಾರತಕ್ಕೆ ಬೌಲಿಂಗ್ ವೈಫಲ್ಯದಿಂದ ಹಿನ್ನಡೆ. ಪೂರ್ಣ ವರದಿ ಇಲ್ಲಿದೆ.
Captain Shai Hope made the Indian bowlers sweat as he smashed an unbeaten 162 runs to secure a victory for the West Indies. Team India clinched the series.
ಭಾರತದ ಬೌಲರ್‌ಗಳನ್ನು ಬೆವರಿಳಿಸಿ, ಅಜೇಯ 162 ರನ್ ಸಿಡಿಸಿ ವಿಂಡೀಸ್‌ಗೆ ಗೆಲುವು ತಂದುಕೊಟ್ಟ ನಾಯಕ ಶಾಯ್ ಹೋಪ್. ಸೀರಿಸ್​ ವಶಪಡಿಸಿಕೊಂಡ ಟೀಮ್​ ಇಂಡಿಯಾ
Published on: 

ಕ್ರಿಕೆಟ್​: ಮುಲ್ಲನ್‌ಪುರದ ಪಿಸಿಎ (PCA) ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಆರಂಭಿಕ ಆಘಾತದಿಂದ ಚೇತರಿಸಿಕೊಂಡು ಭಾರತ ತಂಡ ಬೃಹತ್ ಮೊತ್ತ ಕಲೆಹಾಕಿದರೂ, ವೆಸ್ಟ್ ಇಂಡೀಸ್ ಪಡೆ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದು ಬೀಗಿದೆ.

ಸರಣಿಯನ್ನು ಭಾರತ ತಂಡ 2-1 ಅಂತರದಲ್ಲಿ ತನ್ನದಾಗಿಸಿಕೊಂಡಿದ್ದರೂ, ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಆಡಿದ ಆಟ ಎಲ್ಲರ ಹುಬ್ಬೇರಿಸುವಂತೆ ಮಾಡಿತು.

4 ರನ್‌ಗೆ 2 ವಿಕೆಟ್ ಪತನ: ರಾಹುಲ್-ರೋಹಿತ್ ಅಬ್ಬರ

ಮೊದಲು ಬ್ಯಾಟಿಂಗ್ ಮಾಡಲು ಇಳಿದ ಭಾರತಕ್ಕೆ ಬಿಗ್ ಶಾಕ್ ಕಾದಿತ್ತು. ನಾಯಕ ಶುಭಮನ್ ಗಿಲ್ ಕೇವಲ 1 ರನ್‌ಗೆ ಔಟಾದರೆ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಎದುರಿಸಿದ ಮೊದಲೇ ಎಸೆತದಲ್ಲೇ ಗೋಲ್ಡನ್​ ಡಕ್ ಆಗಿ ವಿಕೆಟ್ ಒಪ್ಪಿಸಿದರು. ಕೇವಲ 4 ರನ್ ಆಗುವಷ್ಟರಲ್ಲೇ 2 ವಿಕೆಟ್ ಕಳೆದುಕೊಂಡ ಭಾರತ ಚಿಂತಾಕ್ರಾಂತ ಸ್ಥಿತಿಯಲ್ಲಿತ್ತು.

ತಮ್ಮ ಫಾರ್ಮ್‌ ಬಗ್ಗೆ ನಿರಂತರ ಟೀಕೆ ಎದುರಿಸುತ್ತಿದ್ದ ರೋಹಿತ್ ಶರ್ಮಾ (92 ರನ್) ಮತ್ತು ಋತುರಾಜ್ ಗಾಯಕ್ವಾಡ್ ಅದ್ಭುತ ಜೊತೆಯಾಟವಾಡಿ ತಂಡವನ್ನು ಅಪಾಯದಿಂದ ಪಾರು ಮಾಡಿದರು. ರೋಹಿತ್ ತಮ್ಮ ಎಂದಿನ ಶೈಲಿಯಲ್ಲಿ ಬೌಂಡರಿಗಳ ಸುರಿಮಳೆಗೈದು ಕೇವಲ ಕೆಲ ರನ್‌ಗಳಿಂದ ಶತಕ ವಂಚಿತರಾದರು.

ಇನ್ನು ಕೆ.ಎಲ್. ರಾಹುಲ್ ಕ್ರೀಸ್‌ಗೆ ಬಂದ ತಕ್ಷಣದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿ, ಕೇವಲ 87 ಎಸೆತಗಳಲ್ಲಿ ಅಜೇಯ 129 ರನ್‌ ಸಿಡಿಸಿ ಮಿಂಚಿದರು. ಇವರ ಈ ಅಬ್ಬರದ ಬ್ಯಾಟಿಂಗ್ ಬಲದಿಂದ ಭಾರತ ತಂಡ ನಿಗದಿತ ಓವರ್‌ಗಳಲ್ಲಿ 351 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಲು ಸಾಧ್ಯವಾಯಿತು.

Also Read
ದೆಹಲಿ ಪೊಲೀಸರು ಅಮಿತ್​ ಶಾ ಕೈಗೊಂಬೆಯಾಗಿದ್ದಾರೆ! ಪ್ರತಿಭಟನೆ ನಮ್ಮ ಮೂಲಭೂತ ಹಕ್ಕು; "ಜಿರಳೆ" ನಾಯಕ ಅಭಿಜಿತ್​ ದಿಪ್ಕೆ ಆಕ್ರೋಶ! Abhijit Dipke
Captain Shai Hope made the Indian bowlers sweat as he smashed an unbeaten 162 runs to secure a victory for the West Indies. Team India clinched the series.

ಶಾಯ್ ಹೋಪ್ ಭರ್ಜರಿ ಶತಕ: ಕೈಜಾರಿದ ಪಂದ್ಯ

351 ರನ್‌ಗಳ ದೊಡ್ಡ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭದಲ್ಲೇ ಆರಂಭಿಕ ಜಾನ್ ಕ್ಯಾಂಪ್‌ಬೆಲ್ (10 ರನ್) ವಿಕೆಟ್​ ಒಪ್ಪಿಸಿದರು. ಆದರೆ, ನಾಯಕ ಶಾಯ್ ಹೋಪ್ ಮತ್ತು ಅಮೀರ್ ಜಂಗೂ (67 ರನ್) ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತಿತು. ಈ ಇಬ್ಬರು ಸೇರಿ 109 ರನ್‌‌ಗಳ ಮಹತ್ವದ ಜೊತೆಯಾಟವಾಡಿ ತಂಡಕ್ಕೆ ಭದ್ರವಾದ ಬುನಾದಿ ಹಾಕಿಕೊಟ್ಟರು.

ನಂತರ ಬಂದ ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಭಾರತದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಅಜೇಯ 162 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ಹೋಪ್, ಭಾರತದ ಕೈಯಿಂದ ಪಂದ್ಯವನ್ನು ಸಂಪೂರ್ಣವಾಗಿ ಕಸಿದುಕೊಂಡರು.

ಭಾರತದ ಸೋಲಿಗೆ ಕಾರಣಗಳೇನು?

ಕೃತಕ ಬೆಳಕಿನಡಿ ಬೌಲಿಂಗ್ ಮಾಡಿದ ಭಾರತದ ಬೌಲರ್‌ಗಳು ಸಂಪೂರ್ಣ ಮಂಕಾಗಿದ್ದರು. ನಿಯಮಿತವಾಗಿ ವಿಕೆಟ್ ಪಡೆಯಲು ಪರದಾಡಿದ ಬೌಲಿಂಗ್ ಪಡೆಗೆ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಗಂಭೀರವಾಗಿ ಕಾಡಿತು. ಫೀಲ್ಡಿಂಗ್‌ನಲ್ಲಿ ಭಾರತೀಯ ಆಟಗಾರರು ಬದ್ಧತೆ ತೋರಲಿಲ್ಲ. ಪ್ರಮುಖವಾಗಿ ಮೂರು ಕ್ಯಾಚ್‌ಗಳನ್ನು ಕೈಚೆಲ್ಲಿದ್ದೇ ವೆಸ್ಟ್ ಇಂಡೀಸ್ ಬ್ಯಾಟರ್‌ಗಳಿಗೆ ವರದಾನವಾಯಿತು ಎನ್ನಬಹುದಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net