

ನವದೆಹಲಿ: ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ 2020ನೇ ಸಾಲಿನ ವಿಂಬಲ್ಡನ್ ಟೂರ್ನಮೆಂಟ್ ರದ್ದಾಗಿದೆ. ಎರಡನೇ ವಿಶ್ವಯುದ್ಧ ಬಳಿಕ ಇದೇ ಮೊದಲ ಬಾರಿಗೆ ವಿಶ್ವಪ್ರಸಿದ್ಧ ಟೆನ್ನಿಸ್ ಟೂರ್ನಮೆಂಟ್ಗೆ ತಡೆ ನೀಡಲಾಗಿದೆ.
ಟೂರ್ನಮೆಂಟ್ ಇಂಗ್ಲೆಂಡ್ನ ಆಲ್ ಇಂಗ್ಲೆಂಡ್ ಕ್ಲಬ್ನಲ್ಲಿ ಜೂನ್ 29ರಿಂದ ಆರಂಭವಾಗಿ ಜುಲೈ 12ಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ, ಕರೊನಾ ಕರಿಛಾಯೆ ಟೂರ್ನಮೆಂಟ್ ಮೇಲೆ ಆವರಿಸಿರುವುದರಿಂದ ವಿಂಬಲ್ಡನ್ಗೆ ಗುಡ್ಬೈ ಹೇಳಲಾಗಿದೆ.
ಇದೇ ವೇಳೆ ಮುಂದಿನ ಆವೃತ್ತಿಯ ದಿನಾಂಕವು ಕೂಡ ನಿಗದಿಯಾಗಿದ್ದು, 2021 ಜೂನ್ 28ರಿಂದ ಜುಲೈ 11ರವರೆಗೆ ವಿಂಬಲ್ಡನ್ ಟೂರ್ನಿ ನಡೆಯಲಿದೆ.
ಮೊದಲ ವಿಂಬಲ್ಡನ್ ಟೂರ್ನಿ 1877ರಲ್ಲಿ ನಡೆಯಿತು. ಅಂದಿನಿಂದ ಪ್ರತಿ ವರ್ಷ ನಡೆಸಿಕೊಂಡು ಬರಲಾಗುತ್ತಿದೆ. 1915-18ರವರೆಗೆ ನಡೆದ ಮೊದಲ ವಿಶ್ವಯುದ್ಧ ಮತ್ತು 1940-45ರವರೆಗೆ ನಡೆದ ಎರಡನೇ ವಿಶ್ವಯುದ್ಧದ ವೇಳೆ ಟೂರ್ನಿಯನ್ನು ನಿಲ್ಲಿಸಲಾಗಿತ್ತು. ಅದನ್ನು ಬಿಟ್ಟರೆ ಇದೇ ಮೊದಲ ಬಾರಿಗೆ ಟೂರ್ನಿ ರದ್ದಾಗಿದೆ. (ಏಜೆನ್ಸೀಸ್)