

ಲಂಡನ್: ಮೂರನೇ ಶ್ರೇಯಾಂಕಿತ ಸೆರ್ಬಿಯಾದ ತಾರೆ ನೊವಾಕ್ ಜೋಕೊವಿಕ್ ವಿಂಬಲ್ಡನ್ ಗ್ರಾಂಡ್ ಸ್ಲಾಂ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಠಿಣ ಹೋರಾಟದ ಗೆಲುವು ದಾಖಲಿಸಿದ್ದಾರೆ. ್ರಾನ್ಸ್‌ನ ಗೇಲ್ ಮೊನೊಫಿಲ್ಸ್, 9ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಡಿ ಮಿನೊರ್, ಅಮೆರಿಕದ ಬೆನ್ ಶೆಲ್ಟನ್ ಮುಂದಿನ ಸುತ್ತಿಗೆ ಅರ್ಹತೆ ಸಂಪಾದಿಸಿದ್ದಾರೆ.
ಸೆಂಟರ್ ಕೋರ್ಟ್‌ನಲ್ಲಿ ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಏಳು ಬಾರಿಯ ಚಾಂಪಿಯನ್ ಜೋಕೊವಿಕ್ 6-3, 6-4, 5-7,7-5 ರಿಂದ ವೈಲ್ಡ್ ಕಾರ್ಡ್ ಆಟಗಾರ ಬ್ರಿಟನ್ ಜಾಕೋಬ್ ಫಿಯರ್ನ್ಲಿ ಎದುರು ಭರ್ತಿ ಮೂರು ಗಂಟೆಗಳ ಹೋರಾಟದಲ್ಲಿ ಗೆಲುವು ದಕ್ಕಿಸಿಕೊಂಡರು. ಸ್ವಿಜರ್ಲೆಂಡ್‌ನ ಸ್ಟಾನ್ ವಾವ್ರಿಂಕ 6-7,4-6,6-7 ರಿಂದ ಗೇಲ್ ಮೊನೊಫಿಲ್ಸ್ ಎದುರು ಮುಗ್ಗರಿಸಿದರು. ಪೋಲೆಂಡ್‌ನ ಹಬರ್ಟ್ ಹರ್ಕೆಜ್ 6-7, 4-6,6-2,6-6 ಹಿನ್ನಡೆಯಲ್ಲಿದ್ದಾಗ ಗಾಯಗೊಂಡು ಕಣದಿಂದ ಹಿಂದೆ ಸರಿದರು. 9ನೇ ಶ್ರೇಯಾಂಕಿತ ಅಲೆಕ್ಸ್ ಡಿ ಮುನೊರ್ 6-2, 6-2, 7-5 ರಿಂದ ಸ್ಪೇನ್‌ನ ಜೌಮೆ ಮುನ್ನರ್ ಅವರನ್ನು ಪರಾಭವಗೊಳಿಸಿ ಮೂರನೇ ಸುತ್ತಿಗೇರಿದರು.
ಟುನೀಷಿಯಾದ ಒನ್ಸ್ ಜಬೇರ್ 6-1, 7-5 ರಿಂದ ಅಮೆರಿಕದ ರಾಬಿನ್ ಮಾಂಟ್ಗೊಮೆರಿ ಎದುರು ಸುಲಭ ಗೆಲುವು ದಾಖಲಿಸಿದರೆ, 5ನೇ ಶ್ರೇಯಾಂಕಿತೆ ಜೆಸ್ಸಿಕಾ ಪೆಗುಲಾ ಎರಡನೇ ಸುತ್ತಿನಲ್ಲಿ ಆಘಾತ ಕಂಡಿದ್ದಾರೆ. ಪೆಗುಲಾ 4-6, 7-6 (9-7), 1-6 ಮೂರು ಸೆಟ್‌ಗಳ ಹೋರಾಟದಲ್ಲಿ ಚೀನಾದ ಕ್ಸಿ ನ್ಯು ವಾಂಗ್ ಎದುರು ಸೋಲುಂಡರು. ಇದರೊಂದಿಗೆ ವಾಂಗ್, ರ‌್ಯಾಂಕಿಂಗ್ ಅಗ್ರ-10ರೊಳಗಿನ ಆಟಗಾರ್ತಿಯ ಎದುರು ಮೊದಲ ಗೆಲುವು ಕಂಡರು.
ಅಮೆರಿಕದ ಮ್ಯಾಡಿಸನ್ ಕೀಯ್ಸ 6-2, 6-2 ಅಂತರದಿಂದ ಚೀನಾದ ಯಾನ್ ವಾಂಗ್ ಎದುರು ಸುಲಭ ಗೆಲುವು ಒಲಿಸಿಕೊಂಡರು. ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜಿಕೊವಾ 7-6,7-6 ರಿಂದ 2 ಗಂಟೆ 3 ನಿಮಿಷದ ಹೋರಾಟದಲ್ಲಿ ಜಯ ಸಾಧಿಸಿದರು.
ಮೊದಲ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಅನ್ನು ಹೊರಗಟ್ಟಿದ ಸ್ಪೇನ್‌ನ ಜೆಸ್ಸಿಕಾ ಬೌಜಾಸ್ ಮನೈರೊ ಎರಡನೇ ಸುತ್ತಿನಲ್ಲಿ ದೇಶ ಬಾಂಧವೆ ಕ್ರಿಸ್ಟಿನಾ ಬುಕ್ಸಾ ವಿರುದ್ಧ 7-6, 6-3 ರಿಂದ ಗೆಲುವು ಸಾಧಿಸಿದರು. ಮುಂದಿನ ಸುತ್ತಿನಲ್ಲಿ ಜೆಸ್ಸಿಕಾ ಬೌಸಾಸ್ ಹಾಗೂ ಕ್ರೆಜಿಕೊವಾ ಎದುರಾಗಲಿದ್ದಾರೆ. 14ನೇ ಶ್ರೇಯಾಂಕಿತೆ ಡೇರಿಯಾ ಕಸಟ್ಕಿನಾ 6-0, 6-0 ಸೆಟ್‌ಗಳಿಂದ ಬ್ರಿಟನ್ ಲಿಲಿ ಮಿಯಾಜಕಿ ಎದುರು ಕೇವಲ 50 ನಿಮಿಷಗಳಲ್ಲಿ ಗೆದ್ದು ಬೀಗಿದರು.
ಗೆದ್ದ ಯೂಕಿ, ಸೋತ ಬಾಲಾಜಿ: ಭಾರತದ ಯೂಕಿ ಭಾಂಬ್ರಿ ಹಾಗೂ ್ರಾನ್ಸ್‌ನ ಅಲ್ಬನೊ ಒಲಿವಿಟ್ಟಿ ಪುರುಷರ ಡಬಲ್ಸ್‌ನಲ್ಲಿ ಗೆಲುವಿನ ಆರಂಭ ಕಂಡರೆ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ರೋಹನ್ ಬೋಪಣ್ಣ ಅವರ ಜತೆಗಾರನಾಗಿ ಆಡಲಿರುವ ಎನ್. ಶ್ರೀರಾಮ್ ಬಾಲಾಜಿ ಮೊದಲ ಸುತ್ತಿನಲ್ಲಿ ನಿರಾಸೆ ಕಂಡಿದ್ದಾರೆ. ಯೂಕಿ- ಒಲಿವಿಟ್ಟಿ ಜೋಡಿ ಆರಂಭಿಕ ಸುತ್ತಿನಲ್ಲಿ ಕಜಾಕಿಸ್ತಾನ ಅಲೆಕ್ಸಾಂಡರ್ ಬುಬ್ಲಿಕ್-ಅಲೆಕ್ಸಾಂಡರ್ ಶೆವಚೆಂಕೊ ವಿರುದ್ಧ 6-4, 6-4 ಸೆಟ್‌ಗಳಿಂದ ಸುಲಭ ಗೆಲುವು ದಾಖಲಿಸಿತು. ಶ್ರೀರಾಮ್ ಬಾಲಾಜಿ ಹಾಗೂ ಬ್ರಿಟನ್‌ನ ಜಾನ್ಸನ್ ಜೋಡಿ 4-6, 5-7 ರಿಂದ 4ನೇಶ್ರೇಯಾಂಕಿತ ಮಾರ್ಸೆಲೊ ಅಲ್ವಿರೊ-ಮ್ಯಾಟ್ ಪವಿಕ್ ಎದುರು ಮುಗ್ಗರಿಸಿತು.