ಟೆಸ್ಟ್ ಪಂದ್ಯದಲ್ಲಿ 22ನೇ ಶತಕದ ಸನಿಹ ಕೇನ್ ವಿಲಿಯಮ್ಸನ್

Kane Williamson web1
Published on

ಹ್ಯಾಮಿಲ್ಟನ್: ಶತಕದ ಸನಿಹದಲ್ಲಿರುವ ನಾಯಕ ಕೇನ್ ವಿಲಿಯಮ್ಸನ್ (97*ರನ್, 219 ಎಸೆತ, 16 ಬೌಂಡರಿ) ಮತ್ತು ಆರಂಭಿಕ ಟಾಮ್ ಲಾಥಮ್ (86) ಭರ್ಜರಿ ಬ್ಯಾಟಿಂಗ್ ನಿರ್ವಹಣೆಯ ನೆರವಿನಿಂದ ನ್ಯೂಜಿಲೆಂಡ್ ತಂಡ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ಮುನ್ನಡೆದಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಕಿವೀಸ್ ತಂಡ ಮೊದಲ ದಿನದಂತ್ಯಕ್ಕೆ 2 ವಿಕೆಟ್‌ಗೆ 243 ರನ್ ಗಳಿಸಿದೆ. 22ನೇ ಟೆಸ್ಟ್ ಶತಕದಿಂದ 3 ರನ್ ದೂರವಿರುವ ವಿಲಿಯಮ್ಸನ್ ಮತ್ತು 31 ರನ್ ಗಳಿಸಿರುವ ರಾಸ್ ಟೇಲರ್ ಕ್ರೀಸ್‌ನಲ್ಲಿದ್ದಾರೆ. ಮಳೆಯಿಂದಾಗಿ ಭೋಜನ ವಿರಾಮದವರೆಗೆ ದಿನದಾಟ ಆರಂಭಗೊಂಡಿರಲಿಲ್ಲ.

ಪದಾರ್ಪಣೆಯ ಪಂದ್ಯವಾಡಿದ ವಿಲ್ ಯಂಗ್ (5) ಬೇಗನೆ ಔಟಾದ ಬಳಿಕ ಆರಂಭಿಕ ಟಾಮ್ ಲಾಥಮ್ ಮತ್ತು ವಿಲಿಯಮ್ಸನ್ 2ನೇ ವಿಕೆಟ್‌ಗೆ 154 ರನ್ ಪೇರಿಸಿದರು. ಬಳಿಕ ವಿಲಿಯಮ್ಸನ್-ಟೇಲರ್ ಮುರಿಯದ 3ನೇ ವಿಕೆಟ್‌ಗೆ 75 ರನ್ ಸೇರಿಸಿದರು.

ನ್ಯೂಜಿಲೆಂಡ್ ಮೊದಲ ಇನಿಂಗ್ಸ್: 78 ಓವರ್‌ಗಳಲ್ಲಿ 2 ವಿಕೆಟ್‌ಗೆ 243 (ಲಾಥಮ್ 86, ಯಂಗ್ 5, ವಿಲಿಯಮ್ಸನ್ 97*, ಟೇಲರ್ 31*, ರೋಚ್ 53ಕ್ಕೆ 1, ಗ್ಯಾಬ್ರಿಯೆಲ್ 62ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net