ಕೆಕೆಆರ್​ ಗೆಲುವಿನ ರೂವಾರಿ ಮಿಚೆಲ್​ ಸ್ಟಾರ್ಕ್​ ಯಶಸ್ಸಿಗೆ ಸ್ಫೂರ್ತಿ ತುಂಬಿದ್ದು ಪತ್ನಿ ಅಲಿಸ್ಸಾ!

web starc
Published on

ಬೆಂಗಳೂರು: ಟೂರ್ನಿಯ ದುಬಾರಿ ಆಟಗಾರ ಎನಿಸಿದ್ದರೂ ಮಿಚೆಲ್​ ಸ್ಟಾರ್ಕ್​ ಆರಂಭಿಕ 2 ಪಂದ್ಯಗಳಲ್ಲಿ ಬರೋಬ್ಬರಿ 100 ರನ್​ ಬಿಟ್ಟುಕೊಟ್ಟು ಕೇವಲ 1 ವಿಕೆಟ್​ ಗಳಿಸುವ ಮೂಲಕ ಟೀಕೆಗಳಿಗೆ ಗುರಿಯಾಗಿದ್ದರು. ಕೆಕೆಆರ್​ ಹಣ ವ್ಯರ್ಥಗೊಳಿಸಿತು ಎಂದೂ ಟ್ರೋಲ್​ ಮಾಡಲಾಯಿತು. ಆದರೆ ಟೂರ್ನಿಯ ನಡುವೆ ಆಸೀಸ್​ ಮಹಿಳಾ ಕ್ರಿಕೆಟರ್​ ಹಾಗೂ ಪತ್ನಿ ಅಲಿಸ್ಸಾ ಹೀಲಿ ಕೂಡಿಕೊಂಡ ಬಳಿಕ ಸ್ಟಾರ್ಕ್​ ಬಿಗಿ ದಾಳಿ ಸಂಘಟಿಸಲು ಆರಂಭಿಸಿದ್ದರು.

ಪ್ಲೇಆಫ್​ನಲ್ಲಿ ಮಹತ್ವದ 5 ವಿಕೆಟ್​ ಕಬಳಿಸಿ ಕೆಕೆಆರ್​ ಗೆಲುವಿನ ರೂವಾರಿ ಎನಿಸಿದ 34 ವರ್ಷದ ಸ್ಟಾರ್ಕ್​, "ಅಲಿಸ್ಸಾ ನನ್ನನ್ನು ಸೇರಿಕೊಂಡ ಬಳಿಕ ಎಲ್ಲವೂ ಬದಲಾಯಿತು' ಎಂದು ಹೇಳಿಕೊಂಡಿದ್ದಾರೆ. ಅಲಿಸ್ಸಾ ಐಪಿಎಲ್​ಗೆ ಮುನ್ನ ಮಹಿಳೆಯರ ಪ್ರೀಮಿಯರ್​ ಲೀಗ್​ನಲ್ಲಿ ಆಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net