

ಕ್ರೈಸ್ಟ್ ಚರ್ಚ್: ವಿಕೆಟ್ ಕೀಪರ್-ಬ್ಯಾಟರ್ ಅಲೆಕ್ಸ್ ಕ್ಯಾರಿ (98* ರನ್, 123 ಎಸೆತ,15 ಬೌಂಡರಿ) ಹಾಗೂ ಆಲ್ರೌಂಡರ್ ಮಿಚೆಲ್ ಮಾರ್ಷ್ (80 ರನ್, 102 ಎಸೆತ, 10 ಬೌಂಡರಿ, 1 ಸಿಕ್ಸರ್) ಬ್ಯಾಟಿಂಗ್ ಸಾಹಸದ ನೆರವಿನಿಂದ ಪ್ರವಾಸಿ ಆಸ್ಟ್ರೇಲಿಯಾ ತಂಡ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್‌ಎದುರು 3 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಆಸೀಸ್ 2-0ಯಿಂದ ಸರಣಿ ವಶಪಡಿಸಿಕೊಂಡಿದೆ.
ಸೋಮವಾರ ಮುಕ್ತಾಯಗೊಂಡ ಪಂದ್ಯದಲ್ಲಿ 281 ರನ್ ಸವಾಲಿಗೆ ಪ್ರತಿಯಾಗಿ, 4 ವಿಕೆಟ್‌ಗೆ 77 ರನ್‌ಗಳಿಂದ 4ನೇ ದಿನದಾಟ ಆರಂಭಿಸಿದ ಆಸೀಸ್‌ಗೆ ಅಲೆಕ್ಸ್ ಕ್ಯಾರಿ ಹಾಗೂ ಮಿಚೆಲ್ ಮಾರ್ಷ್ ಜೋಡಿ 6ನೇ ವಿಕೆಟ್‌ಗೆ 140 ರನ್ ಜತೆಯಾಟದ ಮೂಲಕ ಬಲ ತುಂಬಿತು. ಬಳಿಕ ನಾಯಕ ಪ್ಯಾಟ್ ಕಮ್ಮಿನ್ಸ್ (32*) ಉಪಯುಕ್ತ ಕೊಡುಗೆಯಿಂದ ಆಸೀಸ್ 65 ಓವರ್‌ಗಳಲ್ಲಿ 7 ವಿಕೆಟ್‌ಗೆ 281 ರನ್‌ಗಳಿಸಿ ಜಯದ ಕೇಕೆ ಹಾಕಿತು.
ಇದರೊಂದಿಗೆ ಆಸೀಸ್, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ 2023-25ರಲ್ಲಿ ಶೇ. 65.50 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದೆ. ಸರಣಿ ಆರಂಭಕ್ಕೂ ಮುನ್ನ ಅಗ್ರಸ್ಥಾನದಲ್ಲಿದ್ದ ಕಿವೀಸ್ (ಶೇ.50) ಸೋಲಿನೊಂದಿಗೆ 3ನೇ ಸ್ಥಾನಕ್ಕೆ ಇಳಿದಿದೆ.
ನ್ಯೂಜಿಲೆಂಡ್: 162 ಹಾಗೂ 372. ಆಸ್ಟ್ರೇಲಿಯಾ: 256 ಹಾಗೂ 7 ವಿಕೆಟ್‌ಗೆ 281 (ಮಿಚೆಲ್ ಮಾರ್ಷ್ 80, ಅಲೆಕ್ಸ್ ಕ್ಯಾರಿ 98*, ಪ್ಯಾಟ್ ಕಮ್ಮಿನ್ಸ್ 32*, ಬೆನ್ ಸಿಯರ್ಸ್ 90ಕ್ಕೆ4, ಮ್ಯಾಟ್ ಹೆನ್ರಿ 94ಕ್ಕೆ 2).