ನನ್ನ ಹೆಸರೇಕೆ ಇಲ್ಲ... ಟೀಮ್ ಇಂಡಿಯಾ ಪರ ಕಮ್​ಬ್ಯಾಕ್​ ಮಾಡಲು Varun Chakravarthy ಏನೆಲ್ಲಾ ಮಾಡಿದ್ರು ಗೊತ್ತಾ?

Varun Chakravarthy
Published on

ಗ್ವಾಲಿಯಾರ್​: ಇಲ್ಲಿನ ನ್ಯೂ ಮಾಧವರಾವ್​ ಸಿಂಧಿಯಾ ಕ್ರೀಡಾಂಗಣದಲ್ಲಿ ನಡೆದ ಭಾರತ (India) ಹಾಗೂ ಬಾಂಗ್ಲಾದೇಶ (Bangladesh) ನಡುವಿನ ಟಿ20 ಸರಣಿಯ (T20 Series) ಮೊದಲ ಪಂದ್ಯದಲ್ಲಿ ಆತಿಥೇಯರು ಪ್ರವಾಸಿ ತಂಡದ ಎದುರು ತಮ್ಮ ಪ್ರಾಬಲ್ಯವನ್ನು ಮುಂದುವರೆಸಿದ್ದು, ಭಾರತದ ಗೆಲುವಿನಲ್ಲಿ ಬೌಲರ್​ಗಳು ಪ್ರಮುಖ ಪಾತ್ರ ವಹಿಸಿದರು ಎಂದರೆ ತಪ್ಪಾಗಲಾರದು. ಮೂರು ವರ್ಷಗಳ ಬಳಿಕ ರಾಷ್ಟ್ರೀಯ ತಂಡಕ್ಕೆ ಯಶಸ್ವಿಯಾಗಿ ಕಮ್​ಬ್ಯಾಕ್​ ಮಾಡಿದ ಮಿಸ್ಟರಿ ಸ್ಪಿನ್ನರ್​ ವರುಣ್​ ಚಕ್ರವರ್ತಿ (Varun Chakravarthy) ಗೆಲುವಿಗೆ ಪ್ರಮುಖ ರೂವಾರಿ ಎಂದರೆ ತಪ್ಪಾಗಲಾರದು.

ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡ ನಾಯಕ ಸೂರ್ಯಕುಮಾರ್​ ನಿರ್ಧಾರವನ್ನು ಸಮರ್ಥಿಸಿಕೊಂಡ ಬೌಲರ್​ಗಳು ಎದುರಾಳಿ ತಂಡವನ್ನು 19.5 ಓವರ್​ಗಳಲ್ಲಿ 127 ರನ್​ಗಳಿಗೆ ಕಟ್ಟಿ ಹಾಕಿದರು. ಇದರಲ್ಲಿ ಪ್ರಮುಖವಾಗಿ ವರುಣ್​ ಚಕ್ರವರ್ತಿ (Varun Chakravarthy) ವೈಯಕ್ತಿಕ ಶೇಷ್ಠ ಬೌಲಿಂಗ್ ಮಾಡಿದರು. ಪವರ್​ಪ್ಲೇನಲ್ಲಿ (powerplay) ದಾಳಿಗಿಳಿದ ವರುಣ್ (Varun Chakravarthy) ತಾನೆಸೆದ ಮೊದಲ ಓವರ್‌ನಲ್ಲಿ 15 ರನ್ ನೀಡಿ ದುಬಾರಿ ಎನಿಸಿದರು. ಆದರೆ ಮರು ಓವರ್‌ನಲ್ಲಿ ನಜ್ಮೂಲ್ ಹಾಗೂ ತೌಹಿದ್ ಹೃದೊಯ್ ಜತೆಯಾಟಕ್ಕೆ ಬ್ರೇಕ್ ಹಾಕಿದರು. ಬಳಿಕ ಶಾಂಟೋ ಜತೆಯಾದ ಜಾಕಿರ್ ಅಲಿ (8) ಅವರನ್ನು ಇನಿಂಗ್ಸ್‌ನ 10ನೇ ಓವರ್‌ನಲ್ಲಿ ಕ್ಲೀನ್ ಬೌಲ್ಡ್ ಮಾಡಿ ನಿಯಂತ್ರಣ ಹೇರಿದರು. ಮೊದಲ ಓವರ್ ಬಳಿಕ ನಂತರ 3 ಮೂರು ಓವರ್‌ಗಳಲ್ಲಿ 16 ರನ್ ನೀಡಿದ ವರುಣ್ ಚಕ್ರವರ್ತಿ, 14ನೇ ಓವರ್‌ನಲ್ಲಿ ರಿಷಾದ್ ಹೊಸೈನ್‌ರನ್ನು (11) ಡಗೌಟ್ ಸೇರಿಸಿದರು. 

ಪಂದ್ಯದ ಬಳಿಕ ತಮ್ಮ ಕಮ್​ಬ್ಯಾಕ್​ ಕುರಿತು ಮಾತನಾಡಿರುವ ವರುಣ್ (Varun Chakravarthy)​, ನಾನು ಐಪಿಎಲ್‌ನಲ್ಲಿ (IPL) ಮಾಡುತ್ತಿದ್ದ ಕೆಲವು ಪ್ರಯೋಗ ಇಲ್ಲೂ ಮುಂದುವರೆಸಿದೆ. ನಾನು ವಾಸ್ತವದಲ್ಲಿ ಬದುಕಲು ಬಯಸುತ್ತೇನೆ. ಹಿಂದೆ ನಡೆದಿರುವ ಬಗ್ಗೆ ಯೋಚಿಸುವುದಿಲ್ಲ. ಐಪಿಎಲ್ ನಂತರ, ನಾನು ಕೆಲವು ಪಂದ್ಯಗಳನ್ನು ಆಡಿದ್ದೇನೆ. ಮುಖ್ಯವಾಗಿ ಟಿಎನ್‌ಪಿಎಲ್‌ನಲ್ಲಿ (TNPL) ಸಾಕಷ್ಟು ಕಲಿತಿದ್ದೇನೆ. ಮೊದಲಿಗೆ ನಾನು ಸೈಡ್-ಸ್ಪಿನ್ ಬೌಲರ್ ಆಗಿದ್ದೆ, ಆದರೆ ಇದೀಗ ನಾನು ಸಂಪೂರ್ಣವಾಗಿ ಓವರ್-ಸ್ಪಿನ್ ಬೌಲರ್ ಆಗಿ ಬದಲಾಗಿದ್ದೇನೆ.

ಟಿಎನ್​ಪಿಎಲ್​ನಲ್ಲಿ (TNPL) ನಾನು ಆರ್​. ಅಶ್ವಿನ್​ (R Ashwin) ಅವರೊಂದಿಗೆ ಕೆಲಸ ಮಾಡಿದ್ದು, ತುಂಬಾ ಸಹಕಾರಿ ಆಗಿದೆ. ಅಲ್ಲಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಸರಣಿಗೆ ಭರ್ಜರಿ ತಯಾರಿ ನಡೆಸಿದೆ. ಈ ಸರಣಿಯ ಮೂಲಕ ನನಗೆ ಎರಡನೇ ಜನ್ಮ ಸಿಕ್ಕಂತಾಯಿತು. ಈ ವಿಚಾರವಾಗಿ ನಾನು ದೇವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ನನ್ನ ಮುಂದೆ ಹಲವು ಸವಾಲುಗಳಿದ್ದವು. ಆಟಗಾರನಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ ಎಂದಾದಾಗ ಕುಗ್ಗದೆ ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇರಬೇಕು. ಆಗ ಒಂದು ದಿನ ಅವಕಾಶದ ಬಾಗಿಲು ತೆರೆಯುತ್ತದೆ.

ಪ್ರತಿಬಾರಿ ಯಾವುದಾದರು ಸರಣಿಗೆ ತಂಡವನ್ನು ಪ್ರಕಟಿಸಿದಾಗ ನನ್ನ ಹೆಸರೇಕೆ ಇಲ್ಲ ಎಂಬುದರ ಬಗ್ಗೆ ನಾನು ಹೆಚ್ಚು ಯೋಚನೆ ಮಾಡುತ್ತಿದ್ದೆ. ಹೀಗಾಗಿ ನಾನು ಕಮ್​ಬ್ಯಾಕ್​ ಮಾಡಬೇಕು ಎಂದುಕೊಂಡೆ. ಹೀಗಾಗಿ ನಾನು ಹೆಚ್ಚಾಗಿ ದೇಶೀಯ ಕ್ರಿಕೆಟ್ (Domestic Cricket)​ ಟೂರ್ನಿಗಳಲ್ಲಿ ಭಾಗಿಯಾಗಲು ಶುರು ಮಾಡಿದೆ. ದೇಶೀಯ ಕ್ರಿಕೆಟ್​ಗೆ ಪ್ರಾಮುಖ್ಯತೆ ನೀಡಿದ ಪರಿಣಾಮ ಇಂದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಹಾಯ ಮಾಡಿತು ಎಂದು ಸ್ಪಿನ್ನರ್​ ವರುಣ್​ ಚಕ್ರವರ್ತಿ (Varun Chakravarthy) ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net