RCBಗೆ ವಿರಾಟ್ ಕೊಹ್ಲಿಯನ್ನೇ ಆಯ್ಕೆ ಮಾಡಿದ್ದೇಕೆ? ಕಾರಣ ತಿಳಿಸಿದ ವಿಜಯ್ ​​ಮಲ್ಯ..

dk - 2025-06-06T224115.385
Published on

RCB: 2025ರ ಐಪಿಎಲ್ ಪ್ರಶಸ್ತಿಯನ್ನು ಗೆದ್ದಾಗಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಿರಂತರ ಚರ್ಚೆಯಲ್ಲಿದೆ. 18 ವರ್ಷಗಳ ದೀರ್ಘ ಕಾಯುವಿಕೆಯ ನಂತರ ತಂಡವು ಮೊದಲ ಬಾರಿಗೆ ಈ ಟ್ರೋಫಿಯನ್ನು ಗೆದ್ದಿದೆ. ಈ ಐತಿಹಾಸಿಕ ಗೆಲುವಿನ ಬಗ್ಗೆ ಮಾಜಿ ತಂಡದ ಮಾಲೀಕ ವಿಜಯ್ ಮಲ್ಯ ಸಂತೋಷ ವ್ಯಕ್ತಪಡಿಸಿದ್ದಾರೆ, ಜತೆಗೆ ಆರ್‌ಸಿಬಿಗೆ ವಿರಾಟ್​​ ಕೊಹ್ಲಿಯನ್ನೇ ಏಕೆ ಆಯ್ಕೆ ಮಾಡಲಾಗಿತ್ತು ಎಂದು ಮಾಹಿತಿ ಬಿಚ್ಚಿಟ್ಟಿದ್ದಾರೆ.

ಯೂಟ್ಯೂಬರ್ ರಾಜ್ ಶಮಾನಿ ಅವರೊಂದಿಗಿನ ಪಾಡ್‌ಕ್ಯಾಸ್ಟ್ ಸಂಭಾಷಣೆಯ ಸಮಯದಲ್ಲಿ, ಮಲ್ಯ ಅವರು ಐಪಿಎಲ್‌ನೊಂದಿಗಿನ ತಮಗಿದ್ದ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ:ಅಪಘಾತವಾದ 3 ದಿನಗಳ ಬಳಿಕ ಶವಗಳ ಪತ್ತೆ! ಆಕ್ಸಿಡೆಂಟ್​​ ದಿನ ಆಗಿದ್ದೇನು? | Accident ವಿಜಯ್​​ ಮಲ್ಯ ಹೇಳಿದ್ದೇನು..? ''ಆರ್‌ಸಿಬಿಯನ್ನು ಬಲಿಷ್ಠ ತಂಡವನ್ನಾಗಿ ಮಾಡಬಲ್ಲ ಆಟಗಾರರನ್ನು ನಾನೇ ಆಯ್ಕೆ ಮಾಡಿದ್ದೇನೆ. ಆದರೆ ವಿರಾಟ್ ಕೊಹ್ಲಿಯ ಸಾಮರ್ಥ್ಯವನ್ನು ಗುರುತಿಸಿದ್ದಕ್ಕೆ ನನಗೆ ತುಂಬಾ ಹೆಮ್ಮೆಯಾಗುತ್ತದೆ. ಆ ಸಮಯದಲ್ಲಿ ಅವರು ಅಂಡರ್-19 ವಿಶ್ವಕಪ್ ತಂಡದ ಭಾಗವಾಗಿದ್ದರು. ಈ ಹುಡುಗ ವಿಶೇಷ ಎಂಬ ಭಾವನೆ ನನ್ನೊಳಗೆ ಇತ್ತು ಮತ್ತು ನಾನು ಅವರನ್ನು ಆಯ್ಕೆ ಮಾಡಿದ್ದೇನೆ'' ಎಂದು ಮಲ್ಯ ಹೇಳಿದ್ದಾರೆ.

ಅಂಡರ್-19 ವಿಶ್ವಕಪ್‌ನಲ್ಲಿ ಅವರ ಬ್ಯಾಟಿಂಗ್‌ನಿಂದ ನಾನು ತುಂಬಾ ಪ್ರಭಾವಿತನಾಗಿದ್ದೆ. ಅದಕ್ಕಾಗಿಯೇ ನಾನು ಅವರನ್ನು ಆಯ್ಕೆ ಮಾಡಿದೆ. ಇಂದು, 18 ವರ್ಷಗಳ ನಂತರವೂ ಅವರು ತಂಡದ ಭಾಗವಾಗಿದ್ದಾರೆ. ಇದು ಒಂದು ದೊಡ್ಡ ವಿಷಯ. ಅವರು ಅಗಾಧ ಶಕ್ತಿ ಮತ್ತು ಪ್ರತಿಭೆಯನ್ನು ಹೊಂದಿದ್ದರು. ಇಂದು ಅವರು ಭಾರತದ ಅತಿದೊಡ್ಡ ಕ್ರಿಕೆಟಿಗರಲ್ಲಿ ಒಬ್ಬರು ಎಂದಿದ್ದಾರೆ.

ಮಲ್ಯ ಇಂದು ಆರ್‌ಸಿಬಿ ಮಾಲೀಕರಾಗಿದ್ದರೆ ಯಾವ ಆಟಗಾರರನ್ನು ಖರೀದಿಸುತ್ತೀರಿ ಎಂದು ಕೇಳಿದಾಗ, ಜಸ್‌ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಅವರಂತಹ ಆಟಗಾರರನ್ನು ಖರೀದಿಸುತ್ತೇನೆ ಎಂದು ಉತ್ತರಿಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net