

ನವದೆಹಲಿ: ಸತತ 5 ಗೆಲುವಿನ ಬಳಿಕ ಸತತ 2 ಪಂದ್ಯಗಳಲ್ಲಿ ಸೋಲು ಅನುಭವಿಸುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್&17ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳುವ ಅವಕಾಶವನ್ನು ಕೈಚೆಲ್ಲಿದೆ. "ನಾವು ಪಂದ್ಯ ಗೆಲ್ಲುವ ಅವಕಾಶ ಹೊಂದಿದ್ದೆವು. ಓವರ್ಗೆ 11&12 ರನ್ ಗಳಿಸಬಹುದಾಗಿತ್ತು. ಆದರೆ ಬೌಲಿಂಗ್ನಲ್ಲಿ 10 ಹೆಚ್ಚುವರಿ ರನ್ ಬಿಟ್ಟುಕೊಟ್ಟಿದ್ದೆವು. ನಾವು ಕೆಲ ಬೌಂಡರಿಗಳನ್ನು ಬಿಟ್ಟುಕೊಡದಿದ್ದರೆ ಚೇಸಿಂಗ್ ಸುಲಭವಾಗಿರುತ್ತಿತ್ತು' ಎಂದು ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 20 ರನ್ಗಳಿಂದ ಸೋಲು ಅನುಭವಿಸಿದ ಬಳಿಕ ಹೇಳಿದ್ದಾರೆ.
"ಸ್ಟಬ್ಸ್ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ಅದರಲ್ಲೂ ಕಳೆದ 10&11 ಪಂದ್ಯಗಳಿಂದ ಉತ್ತಮ ಬೌಲಿಂಗ್ ಮಾಡುತ್ತಿರುವ ಸಂದೀಪ್ ಶರ್ಮ ವಿರುದ್ಧ ಅತ್ಯುತ್ತಮವಾಗಿ ಆಡಿದರು. ನಮ್ಮ ಅತ್ಯುತ್ತಮ ಬೌಲರ್ಗಳಾದ ಚಾಹಲ್&ಸಂದೀಪ್ ವಿರುದ್ಧ 2&3 ಸಿಕ್ಸರ್ಗಳನ್ನು ಹೆಚ್ಚುವರಿಯಾಗಿ ಸಿಡಿಸಿದರು' ಎಂದು ಸ್ಯಾಮ್ಸನ್ ಹೇಳಿದರು.
ಸಂಜು ಸ್ಯಾಮ್ಸನ್ (56) ಗರಿಷ್ಠ ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ ನಾಯಕ ಎನಿಸಿದರು. ಶೇನ್ ವಾರ್ನ್ (55) ಸಾಧನೆಯನ್ನು ಸ್ಯಾಮ್ಸನ್ ಹಿಂದಿಕ್ಕಿದರು.
ಡೆಲ್ಲಿ ತಂಡದ 222 ರನ್ ಸವಾಲಿಗೆ ಪ್ರತಿಯಾಗಿ ಆರಂಭಿಕರಾದ ಯಶಸ್ವಿ ಜೈಸ್ವಾಲ್ (4), ಜೋಸ್ ಬಟ್ಲರ್ (19) ಬೇಗನೆ ನಿರ್ಗಮಿಸಿದರೂ, ಸಂಜು ಸ್ಯಾಮ್ಸನ್ (86) ಹೋರಾಟ ಮುಂದುವರಿಸಿದರು. ಅವರಿಗೆ ರಿಯಾನ್ ಪರಾಗ್ (27) ಮತ್ತು ಶುಭಂ ದುಬೆ (25) ಉತ್ತಮ ಬೆಂಬಲ ಒದಗಿಸಿದರು. ಆದರೆ ಗೆಲುವಿನಿಂದ 60 ರನ್ ದೂರವಿದ್ದಾಗ ಸ್ಯಾಮ್ಸನ್ ಔಟಾದ ಬಳಿಕ ರಾಜಸ್ಥಾನ ದಿಢೀರ್ ಕುಸಿತ ಕಂಡಿತು. ಅಂತಿಮವಾಗಿ 8 ವಿಕೆಟ್ಗೆ 201 ರನ್ ಗಳಿಸಲಷ್ಟೇ ಶಕ್ತವಾಯಿತು. '
*ಉತ್ತಮ ಲೆಂತ್ ಎಸೆತಗಳನ್ನು ಎಸೆಯುವುದು ಅತ್ಯಂತ ಪ್ರಮುಖವಾಗಿತ್ತು. ಡೆತ್ ಓವರ್ಗಳಲ್ಲಿ ಬೌಲಿಂಗ್ ಮಾಡುವಾಗ ಅದೇ ಪ್ರಮುಖ ಸವಾಲು.
| ಕುಲದೀಪ್ ಯಾದವ್, ಪಂದ್ಯಶ್ರೇಷ್ಠ
*ನಮ್ಮ ಬೌಲರ್ಗಳ ನಿರ್ವಹಣೆ ಸಕಾರಾತ್ಮಕವಾಗಿತ್ತು. ಕುಲದೀಪ್ ಮತ್ತೊಮ್ಮೆ ನಮಗೆ ಗೆಲುವು ತಂದುಕೊಟ್ಟರು. ನಾವು ಪ್ರತಿ ಪಂದ್ಯದಿಂದ ಕಲಿಯಲು ಬಯಸಿದ್ದೇವೆ.
| ರಿಷಭ್ ಪಂತ್, ಡೆಲ್ಲಿ ನಾಯಕ