ವಿಡಿಯೋ ಗೇಮ್ಸ್​ ಆಡುವುದರಲ್ಲಿ ಮಗ್ನರಾಗಿದ್ದ ಧೋನಿ ಗಮನ ಸೆಳೆಯಲು ಪತ್ನಿ ಸಾಕ್ಷಿ ಸಿಂಗ್​ ಮಾಡಿದ್ದೇನು?

dhoni
Published on

ರಾಂಚಿ: ಸದ್ಯ ಕೋವಿಡ್​ ಲಾಕ್​ಡೌನ್​ನಿಂದಾಗಿ ಯಾವುದೇ ಕ್ರಿಕೆಟ್​ ಟೂರ್ನಿ, ಸರಣಿ ನಡೆಯುತ್ತಿಲ್ಲ. ಹಾಗಾಗಿ ಸದಾ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಊರಿಂದೂರಿಗೆ ತೆರಳುತ್ತಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಈಗ ಮನೆಯಲ್ಲೇ ಇರಬೇಕಾಗಿದೆ.

ಬಿಡುವಿನ ಸಮಯದಲ್ಲಿ ವಿಡಿಯೋ ಗೇಮ್ಸ್​ ಆಡುವುದನ್ನು ರೂಢಿಸಿಕೊಂಡಿರುವ ಅವರು ಸದಾ ಅದರಲ್ಲೇ ಮುಳುಗಿರುತ್ತಾರೆ. ಪಕ್ಕದಲ್ಲಿ ಪತ್ನಿ ಸಾಕ್ಷಿ ಸಿಂಗ್​ ಇದ್ದರೂ ಅವರನ್ನು ಮಾತನಾಡಿಸದೆ ಧೋನಿ ತಮ್ಮ ಪಾಡಿಗೆ ತಾವು ವಿಡಿಯೋ ಗೇಮ್ಸ್​ ಆಡುವುದರಲ್ಲಿ ಮಗ್ನರಾಗಿರುತ್ತಾರೆ.

ಇದರಿಂದ ಬೇಸರಗೊಂಡ ಸಾಕ್ಷಿ ಸಿಂಗ್​, ತಮ್ಮ ಪತಿಯ ಗಮನಸೆಳೆಯಲು ಧೋನಿಯ ಕಾಲಿನ ಹೆಬ್ಬರಳನ್ನು ಬಲವಾಗಿ ಕಚ್ಚಿದರಂತೆ... ಅಲ್ಲ, ಅಲ್ಲ... ಜೋರಾಗಿ ಕಚ್ಚುವಂತೆ ನಟಿಸಿದರಂತೆ. ಆದರೂ ಧೋನಿ ಮಾತ್ರ ವಿಡಿಯೋ ಗೇಮ್ಸ್​ ಆಡುವುದನ್ನು ನಿಲ್ಲಿಸಲಿಲ್ಲವಂತೆ.

ಈ ಚಿತ್ರವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿರುವ ಧೋನಿ, ಗಮನಸೆಳೆಯಲು ಯತ್ನಿಸುವ ಪ್ರೀತಿಯ ಪತ್ನಿ! ವಿಡಿಯೋ ಗೇಮ್ಸ್​ V/s ಪತ್ನಿ ಎಂಬ ಅಡಿಬರಹ ನೀಡಿದ್ದಾರೆ. ಇದು ಸಾಕಷ್ಟು ಲೈಕ್ಸ್​ ಪಡೆದುಕೊಳ್ಳುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net