

Shadab Khan : ಪಾಕಿಸ್ತಾನ ಕ್ರಿಕೆಟ್ ತಂಡದ ಆಲ್ರೌಂಡರ್ ಆಟಗಾರ ಶಾದಬ್ ಖಾನ್ ಅವರಿಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಹಿಳಾ ಅಭಿಮಾನಿಯೊಬ್ಬರು ವಿಚಿತ್ರ ಪ್ರಶ್ನೆಯೊಂದನ್ನು ಕೇಳಿದ್ದರು. ಈ ವೇಳೆ ಶಾದಬ್ ಕೊಟ್ಟ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.
ಪಾಕಿಸ್ತಾನದ ಹಲವಾರು ನಟಿಯರು ತಮ್ಮ ಕ್ರಿಕೆಟಿಗರಿಂದ ಅನೇಕ ಮೆಸೇಜ್ಗಳನ್ನು ಸ್ವೀಕರಿಸಿರುವುದಾಗಿ ಹೇಳಿಕೊಂಡಿದ್ದಾರೆ. ಇದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿ ಸಾಕಷ್ಟು ಚರ್ಚೆಗಳು ಸಹ ನಡೆದವು. ಇದೇ ಸಂದರ್ಭದಲ್ಲಿ ಪಾಕ್ ಮೂಲದ ಖ್ಯಾತ ಟಿಕ್ಟಾಕರ್ ಶಹತಾಜ್ ಖಾನ್, ಶದಾಬ್ ಖಾನ್ ಅವರನ್ನು ಗುರಿಯಾಗಿಸಿಕೊಂಡು ಸಂಚಲನಾತ್ಮಕ ಕಾಮೆಂಟ್ಗಳನ್ನು ಮಾಡಿದ್ದರು. ಶಾದಬ್ ಅವರು ವಾಟ್ಸ್ಆ್ಯಪ್ನಲ್ಲಿ ಮೆಸೇಜ್ ಮಾಡುತ್ತಿದ್ದಾರೆ. ಅವರು ನನ್ನ ಸಂಪರ್ಕದಲ್ಲಿದ್ದು, ನನಗೆ ಪ್ರಪೋಸ್ ಮಾಡಿದ್ದಾರೆ ಎಂದು ಹೇಳಿದ್ದರು.
ಇದೇ ವಿಚಾರಕ್ಕೆ ಶಾದಾಬ್ ಖಾನ್ ಇತ್ತೀಚೆಗೆ ಪ್ರತಿಕ್ರಿಯಿಸಿದ್ದಾರೆ. ಜಿಯೋ ನ್ಯೂಸ್ ಶೋ ಒಂದರಲ್ಲಿ ಭಾಗವಹಿಸಿ ತಮ್ಮ ಅಭಿಮಾನಿಗಳೊಂದಿಗೆ ಸ್ವಲ್ಪ ಸಮಯದವರೆಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ, ಮಹಿಳಾ ಅಭಿಮಾನಿಯೊಬ್ಬರು ಮಾತನಾಡಿ, ಅನೇಕ ಕ್ರಿಕೆಟಿಗರು ಜಾಲತಾಣದಲ್ಲಿ ಮಸೇಜ್ ಮಾಡುತ್ತಿದ್ದಾರೆ ಎಂದು ಅನೇಕ ನಟಿಯರು ಹೇಳುತ್ತಿದ್ದಾರೆ. ನೀವು ಕೂಡ ಅವರಲ್ಲಿ ಒಬ್ಬರೇ? ನೀವು ಎಂದಾದರೂ ಯಾರಿಗಾದರೂ ಅಂತಹ ಸಂದೇಶವನ್ನು ಕಳುಹಿಸಿದ್ದೀರಾ? ಎಂದು ಕೇಳಿದರು.
ಈ ಪ್ರಶ್ನೆಗೆ ಉತ್ತರಿಸಿದ ಶಾದಬ್ ಖಾನ್, ಕ್ರಿಕೆಟಿಗರು ನಟಿಯರಿಗೆ ಮಸೇಜ್ ಮಾಡುವುದರಲ್ಲಿ ತಪ್ಪೇನು? ಕ್ರಿಕೆಟಿಗರು ನಿಜವಾಗಿಯೂ ನಟಿಯರಿಗೆ ಸಂದೇಶ ಕಳುಹಿಸುತ್ತಾರೆ ಎಂದು ಭಾವಿಸೋಣ. ಅವರಿಗೆ ಅದು ಇಷ್ಟವಾಗದಿದ್ದರೆ, ಅವರು ಉತ್ತರಿಸದೇ ಸುಮ್ಮನಾದರೇ ಸಾಕು. ನೀವು ಆ ರೀತಿ ಮಾಡಿದರೆ ಮುಂದಿನ ಬಾರಿ ಯಾರೂ ನಿಮಗೆ ಮೆಸೇಜ್ ಮಾಡುವ ಧೈರ್ಯ ಮಾಡುವುದಿಲ್ಲ. ಇದರ ಬದಲಾಗಿ ಮಸೇಜ್ಗಳಿಗೆ ಪ್ರತಿಕ್ರಿಯೆ ನೀಡಿದರೆ, ಆತನ ಬಗ್ಗೆಯೂ ಆಸಕ್ತಿ ಹೊಂದಿದ್ದಾರೆಂದು ನಾವು ಭಾವಿಸಬೇಕೇ? ಎಂದು ಶಾದಬ್ ಹೇಳಿದರು.
ಕೆಲವು ನಟಿಯರು ಇತ್ತೀಚೆಗೆ ಈ ವಿಷಯದ ಬಗ್ಗೆ ತುಂಬಾ ದೊಡ್ಡ ಮಾತುಗಳನ್ನಾಡಿದ್ದಾರೆ. ನಾನು ಅವರ ವಿಡಿಯೋಗಳನ್ನು ನೋಡಿದ್ದೇನೆ. ಆದರೆ, ಅವರು ಹೇಳುವ ಎಲ್ಲವೂ ನಿಜವಲ್ಲ. ಕೆಲವೊಮ್ಮೆ ಅವರು ಸಣ್ಣ ವಿಷಯಗಳನ್ನು ಸಹ ಉತ್ಪ್ರೇಕ್ಷಿಸುತ್ತಾರೆ. ಪ್ರಸಿದ್ಧರಾಗಲು ಬಯಸಿದಾಗ ಅಂತಹ ವಿಷಯಗಳನ್ನು ಬಹಿರಂಗವಾಗಿಯೇ ಮಾತನಾಡುತ್ತಾರೆ. ಇದು ನಮ್ಮ ತಂಡದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ತಂಡದ ಯಾವ ಸದಸ್ಯರು ಮೆಸೇಜ್ ಕಳುಹಿಸಿದ್ದಾರೆ ಎಂಬುದರ ಕುರಿತು ಕೆಲವು ಚರ್ಚೆಗಳು ನಡೆಯುತ್ತಿವೆ. ಕೆಲವು ನಟಿಯರು ಪ್ರಸಿದ್ಧರಾಗಲು ಇಂತಹ ವಿಷಯಗಳ ಬಗ್ಗೆ ಮಾತನಾಡಲು ಸಮಯವನ್ನು ಬಳಸುತ್ತಿದ್ದಾರೆ. ವಿಶೇಷವಾಗಿ ವಿಶ್ವಕಪ್ನಂತಹ ಮೆಗಾ ಟೂರ್ನಮೆಂಟ್ಗಳು ನಡೆಯುತ್ತಿರುವಾಗ, ಈ ವಿಷಯಗಳ ಬಗ್ಗೆ ಮಾತನಾಡುವ ಮೂಲಕ ಎಲ್ಲರ ಗಮನವನ್ನು ಸೆಳೆಯಲು ಬಯಸುತ್ತಾರೆ ಎಂದು ಶಾದಾಬ್ ಖಾನ್ ಹೇಳಿದರು.
ಅಂದಹಾಗೆ ಶಾದಬ್ ಖಾನ್ ಅವರು 2017ರಲ್ಲಿ ಪಾಕಿಸ್ತಾನ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದರ್ಪಣೆ ಮಾಡಿದರು. ಅವರು ಸ್ಪಿನ್ ಬೌಲಿಂಗ್ ಆಲ್ರೌಂಡರ್. 26 ವರ್ಷದ ಶಾದಬ್ ಇದುವರೆಗೆ ಆರು ಟೆಸ್ಟ್, 70 ಏಕದಿನ ಮತ್ತು 104 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆಯಾ ಸ್ವರೂಪಗಳಲ್ಲಿ ಕ್ರಮವಾಗಿ 300, 855 ಮತ್ತು 679 ರನ್ ಗಳಿಸಿದ್ದಾರೆ. ಅದೇ ರೀತಿ, ಟೆಸ್ಟ್ನಲ್ಲಿ 14, ಏಕದಿನ ಪಂದ್ಯಗಳಲ್ಲಿ 85 ಮತ್ತು ಟಿ20 ಪಂದ್ಯಗಳಲ್ಲಿ 107 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅವರು ಕೊನೆಯ ಬಾರಿಗೆ 2023ರ ನವೆಂಬರ್ನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದರು.
ಶದಾಬ್ ಖಾನ್ ಅವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ, ಪಾಕ್ ದಿಗ್ಗಜ ಕ್ರಿಕೆಟಿಗ ಸಕ್ಲೇನ್ ಮುಷ್ತಾಕ್ ಅಲಿ ಅವರ ಪುತ್ರಿ ಮಲೈಕಾ ಅವರನ್ನು ವಿವಾಹವಾಗಿದ್ದಾರೆ. ಶಾದಬ್ ಮತ್ತು ಮಲೈಕಾ ಅವರ ವಿವಾಹವು 2023ರಲ್ಲಿ ನಡೆಯಿತು. (ಏಜೆನ್ಸೀಸ್)