ನನಗಾದ ಅಂತ್ಯಂತ ನೋವಿನ ಸಂಗತಿ ಇದು! ಎಸ್​ಆರ್​ಎಚ್ ತಂಡದ ಮೇಲೆ ವಾರ್ನರ್​ ಬೇಸರ

Warner
Published on

ನವದೆಹಲಿ: ಕಳೆದ ಐಪಿಎಲ್​ ಆವೃತ್ತಿಯಲ್ಲಿ ಡೇವಿಡ್​ ವಾರ್ನರ್​ ಆಟ ನೀರಸವಾಗಿತ್ತು. ಹೀಗಾಗಿ ವಾರ್ನರ್​ ಅವರನ್ನು ನಾಯಕತ್ವ ಸ್ಥಾನದಿಂದ ಕೆಳಗಿಸಿದ್ದಲ್ಲದೆ, ಈ ಬಾರಿ ಸನ್​ ರೈಸರ್ಸ್​ ಹೈದರಾಬಾದ್ (ಎಸ್​ಆರ್​ಎಚ್​)​ ತಂಡದಿಂದಲೂ ಕೈಬಿಡಲಾಗಿದೆ.

ಮುಂದಿನ ಮೆಗಾ ಹರಾಜಿಗಾಗಿ ಎಸ್​ಆರ್​ಎಚ್​ ತಂಡ ಎದುರು ನೋಡುತ್ತಿದೆ. ಇತ್ತ 2021ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವಾರ್ನರ್​, ತನ್ನ ಫಾರ್ಮ್​ಗೆ ಮರಳಿದರು. ಇತ್ತೀಚೆಗೆ ಅವರು ಎಸ್​ಆರ್​ಎಚ್​ ತಂಡದಿಂದ ತನ್ನನ್ನು ತೆಗೆದುಹಾಕಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ನಾಯಕತ್ವ ಸ್ಥಾನದಿಂದ ಕೆಳಗಿಳಿಸಿದ್ದೇ ಅತ್ಯಂತ ನೋವಿನ ಸಂಗತಿ ಎಂದು ವಾರ್ನರ್​ ಹೇಳಿಕೊಂಡಿದ್ದಾರೆ.

ನೀವು ನಾಯಕನನ್ನು ಕೈ ಬಿಟ್ಟರೆ ಮತ್ತು ತಂಡಕ್ಕಾಗಿ ಆತನ ಕೊಡುಗೆಯನ್ನೂ ನೋಡಿಯೂ ಅವನನ್ನು ತಂಡದಲ್ಲಿ ಆಯ್ಕೆ ಮಾಡದಿದ್ದರೆ, ಅದು ತಂಡದಲ್ಲಿರುವ ಯುವ ಆಟಗಾರರಿಗೆ ಯಾವ ಸಂದೇಶವನ್ನು ರವಾನಿಸುತ್ತದೆ ತಿಳಿದಿದೆಯಾ ಎಂದು ವಾರ್ನರ್​ ಅಸಮಾಧಾನ ಹೊರಹಾಕಿದರು.

2016ರಲ್ಲಿ ಎಚ್​ಆರ್​ಎಚ್​ ತಂಡವನ್ನು ಏಕೈಕ ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದ ವಾರ್ನರ್, "ನನಗೆ ಹೆಚ್ಚು ನೋವುಂಟುಮಾಡುವ ಸಂಗತಿಯೆಂದರೆ, ಇತರ ಹುಡುಗರು ಈಗ 'ಓಹ್, ಇದು ಮುಂದೆ ನನಗೂ ಸಂಭವಿಸಬಹುದು ಎಂದು ಯೋಚಿಸುತ್ತಿದ್ದಾರೆ. ಅಲ್ಲದೆ, ತಂಡದಿಂದ ನನ್ನ ನಿರ್ಗಮನವು ಯುವ ಅಭಿಮಾನಿಗಳಿಗೆ ನೋವುಂಟುಮಾಡುತ್ತದೆ ಎಂದು ವಾರ್ನರ್ ಹೇಳಿದ್ದಾರೆ.

ನನ್ನ ಆಟದ ಮೇಲೆ ನನಗೆ ಉತ್ಸಾಹವಿದೆ. ನಾನು ಅಭಿಮಾನಿಗಳೊಂದಿಗೆ ಯಾವುದೇ ರೀತಿಯಲ್ಲಿಯಾದರೂ ಸಂಪರ್ಕಿಸುತ್ತೇನೆ ಏಕೆಂದರೆ ಅಭಿಮಾನಿಗಳು ಎಷ್ಟು ಮುಖ್ಯ ಎಂದು ನನಗೆ ತಿಳಿದಿದೆ ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net