

ಮ್ಯಾಂಚೆಸ್ಟರ್: ಕ್ರೀಡೆಯಲ್ಲಿನ ವರ್ಣಭೇದವನ್ನು ಪ್ರತಿಭಟಿಸುವ ಸಲುವಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಟಗಾರರು ಮುಂಬರುವ ಆತಿಥೇಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಜೆರ್ಸಿಯಲ್ಲಿ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಲಾಂಛನವನ್ನು ಧರಿಸಲಿದ್ದಾರೆ.
ಒಗ್ಗಟ್ಟು ಪ್ರದರ್ಶಿಸುವ ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ವಿಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ತಿಳಿಸಿದ್ದಾರೆ.
ಅಮೆರಿಕದಲ್ಲಿ ಜಾರ್ಜ್ ಫ್ಲಾಯ್್ಡ ಹತ್ಯೆಯ ಬಳಿಕ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಅಭಿಯಾನ ಶುರುವಾಗಿದ್ದು, ಈಗಾಗಲೆ ಫುಟ್ಬಾಲ್ನಲ್ಲೂ ಕೆಲ ಕ್ಲಬ್ ಆಟಗಾರರು ಈ ಲಾಂಛನವನ್ನು ಧರಿಸಿ ಆಡುತ್ತಿದ್ದಾರೆ. ಅಲಿಶಾ ಹೊಸದಾಗಿ ವಿನ್ಯಾಸಗೊಳಿಸಿರುವ ಲಾಂಛನದ ಬಳಕೆಗೆ ಐಸಿಸಿ ಈಗಾಗಲೆ ಅನುಮತಿ ನೀಡಿದೆ. ಇಂಗ್ಲೆಂಡ್-ವಿಂಡೀಸ್ ಟೆಸ್ಟ್ ಸರಣಿ ಜುಲೈ 8ರಿಂದ ನಡೆಯಲಿದೆ.