

ಪ್ರಾವಿಡೆನ್ಸ್ (ಗಯಾನಾ): ಕ್ರಿಕೆಟ್ ಶಿಶು ಪಪುವಾ ನ್ಯೂಗಿನಿ ಎದುರು ಸಾಧಾರಣ ಮೊತ್ತದ ಚೇಸಿಂಗ್ನಲ್ಲಿ ಪರದಾಡಿದ ನಡುವೆ ಆತಿಥೇಯ ವೆಸ್ಟ್ ಇಂಡೀಸ್ ತಂಡ ಟಿ20 ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ 5 ವಿಕೆಟ್ಗಳಿಂದ ಗೆಲುವು ಸಾಧಿಸಿ ಶುಭಾರಂಭ ಕಂಡಿದೆ.
ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಪಪುವಾ ನ್ಯೂಗಿನಿ, ಆರಂಭಿಕ ಆಘಾತದ ನಡುವೆ ಸೆಸೆ ಬವು (50 ರನ್, 43 ಎಸೆತ, 6 ಬೌಂಡರಿ, 1 ಸಿಕ್ಸರ್) ಅರ್ಧಶತಕದ ಹೋರಾಟದಿಂದ 8 ವಿಕೆಟ್ಗೆ 136 ರನ್ ಕಲೆಹಾಕಿತು. ಪ್ರತಿಯಾಗಿ ವಿಂಡೀಸ್, ಬ್ರೆಂಡನ್ ಕಿಂಗ್ (34), ನಿಕೋಲಸ್ ಪೂರನ್ (27) ಉತ್ತಮ ಬುನಾದಿ ಹಾಕಿದ ನಡುವೆ ಮಧ್ಯಮ ಕ್ರಮಾಂಕದಲ್ಲಿ 36 ರನ್ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡು ಪರದಾಡಿತು. ಅಂತಿಮವಾಗಿ ರೋಸ್ಟನ್ ಚೇಸ್ (42*), ಆಂಡ್ರೆ ರಸೆಲ್ (15*) ಆಸರೆಯಲ್ಲಿ 19 ಓವರ್ಗಳಲ್ಲಿ 5 ವಿಕೆಟ್ಗೆ 137 ರನ್ ಗಳಿಸಿ ಜಯ ಒಲಿಸಿಕೊಂಡಿತು.
ಪಪುವಾಗೆ ಕಡಿವಾಣ: 2021ರ ಬಳಿಕ ಮತ್ತೆ ಟಿ20 ವಿಶ್ವಕಪ್ಗೆ ಪ್ರವೇಶ ಪಡೆದಿರುವ ಪಪುವಾ ನ್ಯೂಗಿನಿ 50 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಪರದಾಡಿತು. ಬಳಿಕ ಸೆಸೆ ಚೇತರಿಕೆ ನೀಡಿದರೆ, ಕೊನೆಯಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಕಿಪ್ಲಿನ್ ಡೊರಿಗಾ (27*) ಮೊತ್ತವನ್ನು ಏರಿಸಿದರು. ಆಂಡ್ರೆ ರಸೆಲ್ (19ಕ್ಕೆ 2), ಅಲ್ಜಾರಿ ಜೋಸ್ೆ (34) ಬಿಗಿ ದಾಳಿಯ ನಡುವೆ ಪಪುವಾ ಕೊನೇ 5 ಓವರ್ಗಳಲ್ಲಿ 42 ರನ್ ಕಸಿದು ಗೌರವಯುತ ಮೊತ್ತ ಪೇರಿಸಿತು.
ಪಪುವಾ ನ್ಯೂಗಿನಿ: 8 ವಿಕೆಟ್ಗೆ 136 (ಅಸದ್ ವಾಲಾ 21, ಸೆಸೆ ಬವು 50, ಕಿಪ್ಲಿನ್ ಡೊರಿಗಾ 27*, ರಸೆಲ್ 19ಕ್ಕೆ 2, ಅಲ್ಜಾರಿ ಜೋಸ್ೆ 34ಕ್ಕೆ 2, ಶೆರ್ಡ್ 23ಕ್ಕೆ 1, ಅಕೀಲ್ 9ಕ್ಕೆ 1, ಮೋತಿ 24ಕ್ಕೆ 1). ವೆಸ್ಟ್ ಇಂಡೀಸ್: 19 ಓವರ್ಗಳಲ್ಲಿ 5 ವಿಕೆಟ್ಗೆ 137 (ಬ್ರೆಂಡನ್ ಕಿಂಗ್ 34, ಪೂರನ್ 27, ರೋಸ್ಟನ್ ಚೇಸ್ 42*, ರಸೆಲ್ 15*, ಅಸದ್ ವಾಲಾ 28ಕ್ಕೆ 2).