ಶಾರ್ಜಾದಲ್ಲಿ ಸೋತವರ ಹಣಾಹಣಿ ; ಹಾಲಿ ಚಾಂಪಿಯನ್ ವಿಂಡೀಸ್ - ಬಾಂಗ್ಲಾದೇಶ ಮುಖಾಮುಖಿ

windies and bangla for web
Published on

ಶಾರ್ಜಾ: ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿರುವ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ತಂಡಗಳು ಟಿ20 ವಿಶ್ವಕಪ್ ಟೂರ್ನಿಯ ಸೂಪರ್-12ರ ಮತ್ತೊಂದು ಪಂದ್ಯದಲ್ಲಿ ಎದುರಾಗಲಿವೆ. ಉಪಾಂತ್ಯಕ್ಕೇರಲು ಕೂದಲೆಳೆಯಷ್ಟು ಆಸೆ ಉಳಿಸಿಕೊಂಡಿರುವ ಎರಡು ತಂಡಗಳ ಪಾಲಿಗೆ ಈ ಪಂದ್ಯ ಮಾಡು ಇಲ್ಲವೇ ಮಡಿಯಂತಿದೆ. ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ಹಾಗೂ ದ.ಆಫ್ರಿಕಾ ಎದುರು ಸೋಲನುಭವಿಸಿದರೆ, ಬಾಂಗ್ಲಾದೇಶ ತಂಡ ಶ್ರೀಲಂಕಾ ಹಾಗೂ ಇಂಗ್ಲೆಂಡ್ ತಂಡಗಳಿಗೆ ಶರಣಾಗಿತ್ತು. ಈ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದರೆ, ಗೆದ್ದ ತಂಡದ ಆಸೆ ಜೀವಂತವಾಗಿರಲಿದೆ.

ಎರಡು ತಂಡಗಳ ಪಾಲಿಗೆ ಕದನ ಎಂಟರಘಟ್ಟದಂತಿದೆ. ಅನುಭವಿ ಆಲ್ರೌಂಡರ್ ಜೇಸನ್ ಹೋಲ್ಡರ್ ತಂಡ ಸೇರ್ಪಡೆಯಿಂದ ವಿಂಡೀಸ್ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಕ್ಕೆ ಬಲ ಬಂದಂತಾಗಿದೆ. ಗಾಯಾಳು ಒಬೆದ್ ಮೆಕ್‌ಕಾಯ್ ಬದಲಿಗೆ ಹೋಲ್ಡರ್ ತಂಡದ ಕೂಡಿಕೊಳ್ಳಲಿದ್ದಾರೆ.

ಪಂದ್ಯ ಆರಂಭ: ಮಧ್ಯಾಹ್ನ 3.30

ಮುಖಾಮುಖಿ: 12, ವೆಸ್ಟ್ ಇಂಡೀಸ್: 6, ಬಾಂಗ್ಲಾದೇಶ: 5, ರದ್ದು: 1

ಟಿ20 ವಿಶ್ವಕಪ್: 2, ವೆಸ್ಟ್ ಇಂಡೀಸ್: 1, ಬಾಂಗ್ಲಾದೇಶ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net