ಫುಟ್​ಬಾಲ್​ ಪಂದ್ಯದ ವೇಳೆ ಎದುರಾಳಿ ಆಟಗಾರನಿಗೆ ಗಾಯ; ಮುಂದೆ ನಡೆದಿದ್ದು ಭೀಕರ

Football Fight
Published on

ನವದೆಹಲಿ: ಫುಟ್ಬಾಲ್​ ಒಂದು ಸುಂದರವಾದ ಆಟವಾಗಿದ್ದು, ಈ ಕ್ರೀಡಾ ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯವಾಗಿದೆ. ಕೆಲವೊಮ್ಮೆ ಆಟವಾಡುವ ವೇಳೆ ಆಟಗಾರರ ನಡುವಿನ ವಾಗ್ವಾದ, ಅಂಪೈರ್​ಗಳ ಕೆಟ್ಟ ನಿರ್ಧಾರದಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮೈದಾನದಲ್ಲೇ ಹೊಡೆದಾಟವಾಗುವ ಸಂಭವವಿರುತ್ತದೆ.

ಇದೀಗ ಅದೇ ರೀತಿಯ ಘಟನೆಯೊಂದು ಫುಟ್​ಬಾಲ್​ ಪಂದ್ಯದ ವೇಳೆ ನಡೆದಿದ್ದು, ಯಾವಾಗ ಎಲ್ಲಿ ನಡೆದಿದ್ದು, ಎಂಬುದರ ಬಗ್ಗೆ ಈವರೆಗೆ ಸ್ಪಷ್ಟವಾಗಿಲ್ಲ. ಆದರೆ, ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಎಲ್ಲರ ಹುಬ್ಬೇರಿಸಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಆಡುವ ವೇಳೆ ಆಟಗಾರನೋರ್ವ ಬಾಲ್​ಅನ್ನು ತನ್ನತ್ತ ಎಳೆದುಕೊಳ್ಳುವ ನಿಟ್ಟಿನಲ್ಲಿ ಆಕಸ್ಮಿಕವಾಗಿ ಎದುರಾಳಿ ತಂಡದ ಸದಸ್ಯನ ಕಾಲಿಗೆ ಹೊಡೆಯುತ್ತಾನೆ. ಇದಾದ ಬಳಿಕ ಗಾಯಗೊಂಡ ಆಟಗಾರ ನೋವಿನಿಂದ ನೆಲದ ಬಿದ್ದು, ಹೊರಳಾಡಲು ಶುರು ಮಾಡುತ್ತಾನೆ. ಇದಾದ ಕೆಲವೇ ಕ್ಷಣಗಳಲ್ಲಿ ಮೈದಾನದಲ್ಲಿ ಹೊಡೆದಾಟ ಶುರುವಾಗಿದ್ದು, ಮೈದಾನದಲ್ಲಿನ ಸಿಬ್ಬಂದಿ ಹಾಗೂ ರೆಫ್ರಿಗಳು ಜಗಳವನ್ನು ಬಿಡಿಸಿದ್ದಾರೆ.

ವಿಡಿಯೋ ವೈರಲ್​ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದ್ದು, ಕೆಲವರು ಆಟವಾಡುವ ವೇಳೆ ಈ ರೀತಿಯಾಗುವುದು ಸಹಜ ಇದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸುವುದಕ್ಕೆ ಏನಿದೆ ಎಂದು ಪ್ರಶ್ನಿಸಿದ್ದಾರೆ. ಕೆಲವರು ಉಭಯ ತಂಡಗಳ ಆಟಗಾರರ ವರ್ತನೆಯನ್ನು ಖಂಡಿಸಿದ್ದು, ಅವರು ಗೂಂಡಾ ರೀತಿ ವರ್ತಿಸಿರುವುದು ಖಂಡನೀಯ ಎಂದು ಕಿಡಿಕಾರಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net