

ನವದೆಹಲಿ : ಕ್ರಿಕೆಟಿಗ ಯಜ್ವೇಂದ್ರ ಚಹಲ್ ಅವರು ಬ್ಯಾಟುಬಾಲು ಪಕ್ಕಕ್ಕಿಟ್ಟು, ವಿನೂತನ ಡ್ಯಾನ್ಸ್ ಮೂವ್ಗಳನ್ನು ಮಾಡಿ ನೆಟ್ಟಿಗರ ಮನ ಗೆದ್ದಿದ್ದಾರೆ. ವೈದ್ಯೆ, ನೃತ್ಯಸಂಯೋಜಕಿ ಹಾಗೂ ಜನಪ್ರಿಯ ಯೂಟ್ಯೂಬರ್ ಆಗಿರುವ ಪತ್ನಿ ಧನಶ್ರೀ ವರ್ಮ ಅವರೊಂದಿಗಿನ ಹೊಸ ಫುಟ್ವರ್ಕ್ ಚ್ಯಾಲೆಂಜ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಕ್ಲಿಪ್ಅನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಧನಶ್ರೀ, 'ಫುಟ್ವರ್ಕ್ ಚ್ಯಾಲೆಂಜ್ನಲ್ಲಿ ಇಬ್ಬರಲ್ಲಿ ಯಾರು ಚೆನ್ನಾಗಿ ಮಾಡಿದ್ದೇವೆ ?' ಎಂದು ಪ್ರಶ್ನಿಸಿದ್ದಾರೆ. ಕಾಲಿನ ಚಲನೆಯೇ ಮುಖ್ಯವಾದ ಈ ಡ್ಯಾನ್ಸ್ ಪೀಸ್ಅನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಳೆದ ವರ್ಷವಷ್ಟೇ ಮದುವೆಯಾದ ದಂಪತಿಯ ನಡುವಿನ ಹೊಂದಾಣಿಕೆ ಚೆನ್ನಾಗಿ ಕಂಡುಬಂದಿದೆ ಎಂದು ಹೊಗಳಿದ್ದಾರೆ. (ಏಜೆನ್ಸೀಸ್)