ಬುಮ್ರಾ ಅಲ್ಲ.. ಭಾರತದ ಈ ಸ್ಟಾರ್​ ಬೌಲರ್​ ನನ್ನ ಫೇವರಿಟ್ ಎಂದ ವಾಸಿಮ್​ ಅಕ್ರಮ್!​ | Bowler

Untitled design - 2025-08-09T160550.218
Published on

Bowler : ಇತ್ತೀಚೆಗಷ್ಟೇ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್​ ಜಗತ್ತಿನ ಗಮನಸೆಳೆದರು.

ಹೌದು, ಸಿರಾಜ್​ ಮೊನ್ನೆಯ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಟೀಮ್ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ದರು. ಅಲ್ಲದೆ, ಸರಣಿಯನ್ನು ಸಮಬಲ ಮಾಡುವಲ್ಲಿ ಸಿರಾಜ್​ ಮಹತ್ವದ ಪಾತ್ರವಹಿಸಿದರು. ಈ ಹಿನ್ನೆಲೆಯಲ್ಲಿ ಸಿರಾಜ್​ಗೆ ಪ್ರಶಂಸೆಯ ಸುರಿಮಳೆಯೇ ಹರಿದುಬರುತ್ತಿದೆ. ಇದೀಗ ಪಾಕ್​ ಕ್ರಿಕೆಟ್​ ದಿಗ್ಗಜ ವಾಸಿಮ್​ ಅಕ್ರಮ್​, ಸಿರಾಜ್​​ ಪ್ರದರ್ಶನದ ಬಗ್ಗೆ ಮಾತನಾಡಿದ್ದಾರೆ.

ಸಿರಾಜ್​ ಬೆಸ್ಟ್​ ಎಂದ ವಾಸಿಮ್

ಅಕ್ರಮ್ ಟೆಲಿಕಾಂ ಏಷ್ಯಾ ಸ್ಪೋರ್ಟ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ''ನಾನು ಕೆಲಸ ಮಾಡದೇ ಇರುವಾಗ ಕ್ರಿಕೆಟ್ ನೋಡುವುದು​ ಅಪರೂಪ. ಆದರೆ, ಅಂದು ಮಾತ್ರ ಟೆಸ್ಟ್​ ಸರಣಿಯ ಕೊನೆ ದಿನ ಆಟಕ್ಕೆ ಅಂಟಿಕೊಂಡಿದ್ದೆ. ಸಿರಾಜ್​ ಅಂದು ಹಸಿವು ಮತ್ತು ಉತ್ಸಾಹದಿಂದ ತುಂಬಿದ್ದರು. ಅಂದು ಅದ್ಭುತ ಪ್ರಯತ್ನವಾಗಿತ್ತು.''

5 ಟೆಸ್ಟ್‌ಗಳಲ್ಲಿ ಸುಮಾರು 186 ಓವರ್‌ಗಳನ್ನು ಬೌಲಿಂಗ್ ಮಾಡಿ ಅಂತಿಮ ದಿನದಂದು ಅಷ್ಟೇ ಉಜ್ವಲವಾಗಿ ಆಡಿದ್ದು ಗಮನಾರ್ಹವಾದ ಸಹಿಷ್ಣುತೆ ಮತ್ತು ಮಾನಸಿಕ ಶಕ್ತಿಯನ್ನು ತೋರಿಸುತ್ತದೆ. ಅವರು ಇನ್ನು ಮುಂದೆ ಕೇವಲ ಬೆಂಬಲ ಬೌಲರ್ ಅಲ್ಲ. ಅವರು ದಾಳಿಯನ್ನು ಮುನ್ನಡೆಸುತ್ತಿದ್ದಾರೆ ಮತ್ತು ಅದನ್ನು ಹೃದಯದಿಂದ ಮಾಡುತ್ತಿದ್ದಾರೆ ಎಂದರು.

ಬ್ರೂಕ್ ಅವರದು ಕ್ಯಾಚ್ ಬಿದ್ದಾಗಲೂ ಅವರು ಗಮನವನ್ನು ಕಳೆದುಕೊಳ್ಳಲಿಲ್ಲ. ಅದು ಹೋರಾಟಗಾರನ ಲಕ್ಷಣ. ಟೆಸ್ಟ್ ಕ್ರಿಕೆಟ್ ಜೀವಂತವಾಗಿದೆ ಮತ್ತು ಕಿಕ್ ಮಾಡುತ್ತಿದೆ. ಅಂದು ಭಾರತವೇ ನನ್ನ ಫೇವರಿಟ್​ ಆಗಿತ್ತು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net