ಬೈಕ್ ಅಪಘಾತದಲ್ಲಿ ಆಸೀಸ್ ಸ್ಪಿನ್ ದಿಗ್ಗಜ ಶೇನ್ ವಾರ್ನ್‌ಗೆ ಗಾಯ

shane warne and his son for web
Published on

ಮೆಲ್ಬೋರ್ನ್: ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಸವಾರಿ ಮಾಡುತ್ತಿದ್ದ ಬೈಕ್ ಅಪಘಾತಕ್ಕೀಡಾಗಿದೆ. 52 ವರ್ಷ ಶೇನ್ ವಾರ್ನ್ ಪುತ್ರ ಜಾಕ್ಸನ್ ಜತೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ‘ಕಾಲಿಗೆ ಪೆಟ್ಟು ಬಿದ್ದಿದ್ದು, ಅದೃಷ್ಟವಶಾತ್ ದೊಡ್ಡ ಪ್ರಮಾಣದಲ್ಲಿ ಗಾಯಗಳಾಗಿಲ್ಲ. ಬೆಳಗ್ಗೆ ಎದ್ದಾಗ ನೋವಿನಿಂದ ಬಳಲಿದೆ. ಹೀಗಾಗಿ ಆಸ್ಪತ್ರೆಗೆ ಭೇಟಿ ನೀಡಿದೆ’ ಎಂದು ವಾರ್ನ್ ತಿಳಿಸಿದ್ದಾರೆ. ವಾರ್ನ್ ಆಸೀಸ್ ಪರ 145 ಟೆಸ್ಟ್ ಪಂದ್ಯಗಳಿಂದ 708 ವಿಕೆಟ್ ಪಡೆದಿದ್ದಾರೆ.

52 ವರ್ಷದ ಶೇನ್ ವಾರ್ನ್, ಡಿಸೆಂಬರ್ 8 ರಿಂದ ನಡೆಯಲಿರುವ ಆಶಸ್ ಸರಣಿ ವೇಳೆಗೆ ಚೇತರಿಸಿಕೊಳ್ಳುವ ಭರವಸೆಯಿದ್ದು, ಸರಣಿಯಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಬ್ರಿಸ್ಬೇನ್‌ನಲ್ಲಿ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವೆ ಮೊದಲ ಪಂದ್ಯ ನಡೆಯಲಿದೆ. ಆಶಸ್ ಸರಣಿಯಲ್ಲಿ ಪ್ಯಾಟ್ ಕಮ್ಮಿನ್ಸ್ ಆಸೀಸ್ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಟೀವನ್ ಸ್ಮಿತ್ ಆಸೀಸ್ ತಂಡದ ಉಪನಾಯಕನಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net