ಅವರನ್ನು ಅಲ್ಲಿಯೇ... Champions Trophy ಕುರಿತಂತೆ ಭಾರತದ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ಪಾಕ್​ ಮಾಜಿ ಆಟಗಾರ

India Pakistan
Published on

ನವದೆಹಲಿ: ಚಾಂಪಿಯನ್ಸ್​ ಟ್ರೋಫಿಗೆ (Champions Trophy) ಸಂಬಂಧಿಸಿದಂತೆ ಭುಗಿಲೆದ್ದಿದ ವಿವಾದ ಸುಖಾಂತ್ಯ ಕಂಡಿದ್ದು, ಅದರಂತೆ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯು ಭಾರತದ ಪಂದ್ಯಗಳನ್ನು ಹೈಬ್ರಿಡ್​ ಮಾದರಿಯಲ್ಲಿ ನಡೆಸಲು ಒಪ್ಪಿಗೆ ಸೂಚಿಸಿದ್ದು, ಮೂರು ಷರತ್ತುಗಳನ್ನು ವಿಧಿಸಿದೆ. ಅದರಲ್ಲಿ ಪ್ರಮುಖವಾಗಿ ಭಾರತದ ಆತಿಥ್ಯದಲ್ಲಿ ನಡೆಯುವ ಟೂರ್ನಿಗಳಲ್ಲಿ ಪಾಕಿಸ್ತಾನವು ತಾನು ಸೂಚಿಸಿದ ತಟಸ್ಥ ಸ್ಥಳದಲ್ಲಿ ಆಡುವ ಷರತ್ತನ್ನು ವಿಧಿಸಿದ್ದು, ಈ ವಿಚಾರ ಬಿಸಿಸಿಐ (BCCI) ಹಾಗೂ ಐಸಿಸಿಗೆ (ICC)  ಮಗ್ಗಲ ಮುಳ್ಳಾಗಿ ಪರಿಣಮಿಸಿದೆ.

ಇತ್ತ ಪಾಕಿಸ್ತಾನದ ಬೇಡಿಕೆಗೆ ಅಲ್ಲಿನ ಕೆಲವು ಮಾಜಿ ಆಟಗಾರರು ಸಕಾರಾತ್ಮಕವಾಗಿ ಸ್ಪಂದಿಸಿದರೆ ಮತ್ತಷ್ಟು ಜನ ಮಂಡಳಿಯ ನಿರ್ಧಾರಕ್ಕೆ ಕಿಡಿಕಾರಿದ್ದಾರೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ಶೋಯೆಬ್​ ಅಖ್ತರ್​ (Shoaiab Akthar) ಮಾತನಾಡಿದ್ದು, ಮಂಡಳಿಯ ಈ ಒಂದು ಷರತ್ತಿನ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ಭಾರತಕ್ಕೆ ನುಗ್ಗಿ ಸೋಲಿಸುವಂತೆ ಸಲಹೆ ನೀಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಶೋಯೆಬ್​ ಅಖ್ತರ್ (Shoaiab Akthar)​, ನೀವು ಹೋಸ್ಟಿಂಗ್​ ಹಕ್ಕನ್ನು ಹೊಂದಿದ್ದು, ಅದಕ್ಕೆ ಸಂಬಂಧಿಸಿದ ಶುಲ್ಕವನ್ನು ಪಡೆಯುತ್ತಿದ್ದೀರಾ. ಟೂರ್ನಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ನಿಲುವು ಕೂಡ ಸಮಂಜಸವಾಗಿದೆ. ಚಾಂಪಿಯನ್ಸ್​ ಟ್ರೋಫಿಯನ್ನುನಾವು ಆಯೋಜಿಸಲು ಸಿದ್ದರಿದ್ದು, ಅವರು ಬರಲು ತಯಾರಿಲ್ಲ. ಈ ವಿಚಾರವಾಗಿ ಅವರು ಹೆಚ್ಚಿನ ಆದಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಬೇಕಾಗಿದೆ.

ಭವಿಷ್ಯದಲ್ಲಿ ಭಾರತದ ನೆಲದಲ್ಲಿ ಆಡುವ ವಿಚಾರವಾಗಿ ಮಾತನಾಡುವುದಾದರೆ, ನಾವು ಸ್ಹೇಹದ ಹಸ್ತವನ್ನು ಚಾಚಿ ಅಲ್ಲಿಗೆ ಹೋಗುವುದು ಸೂಕ್ತ. ನಾವು ಭಾರತಕ್ಕೆ ಹೋಗಿ ಅವರನ್ನು ಅಲ್ಲಿಯೇ ಸೋಲಿಸಿ ಬರಬೇಕು. ಅದರ ಬದಲು ತಟಸ್ಥ ಸ್ಥಳದಲ್ಲಿ ಆಡುವ ನಿರ್ಧಾರ ಸರಿಯಲ್ಲ. ಹೈಬ್ರಿಡ್ ಮಾದರಿಯನ್ನು ಮೊದಲೇ ಸಹಿ ಮಾಡಲಾಗಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ಶೋಯೆಬ್​ ಅಖ್ತರ್​ (Shoaiab Akthar) ಹೇಳಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net