

ಬೆಂಗಳೂರು: ಅಶೋಕ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಸ್ ಆಶ್ರಯದಲ್ಲಿ ಇತ್ತೀಚೆಗೆ ನಡೆದ 11ನೇ ಎಜಿಐ ರಾಜ್ಯಮಟ್ಟದ ಅಂತರ ಶಾಲಾ ವಾಲಿಬಾಲ್ ಚಾಂಪಿಯನ್ಷಿಪ್ನಲ್ಲಿ ವಿದ್ಯಾಸೌಧ ಪಬ್ಲಿಕ್ ಸ್ಕೂಲ್ ಮತ್ತು ಕೆನ್ಸ್ರಿ ಸ್ಕೂಲ್ ತಂಡಗಳು ಪ್ರಶಸ್ತಿ ಗೆದ್ದುಕೊಂಡಿವೆ.
ಗುಣಿ ಅಗ್ರಹಾರದ ಅಶೋಕ್ ಪಬ್ಲಿಕ್ ಸ್ಕೂಲ್ ಗ್ರೌಂಡ್ನಲ್ಲಿ ನಡೆದ ಟೂರ್ನಿಯಲ್ಲಿ ಪೀಣ್ಯದ ವಿದ್ಯಾಸೌಧ ಪಬ್ಲಿಕ್ ಸ್ಕೂಲ್ ತಂಡ ಬಾಲಕರ ಮತ್ತು ಬಾಲಕಿಯರ 10 ವಯೋಮಿತಿ, ಬಾಲಕಿಯರ 14 ವಯೋಮಿತಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿತು. ಕೆನ್ಸ್ರಿ ಸ್ಕೂಲ್ ತಂಡ ಬಾಲಕರ 12 ವಯೋಮಿತಿ ಮತ್ತು 14 ವಯೋಮಿತಿ ವಿಭಾಗದಲ್ಲಿ ಪ್ರಶಸ್ತಿ ಜಯಿಸಿತು.