ಹೊಸ ದಾಖಲೆಯೊಂದಿಗೆ ಮತ್ತೆ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ ವಿಶ್ವನಾಥ ಭಾಸ್ಕರ ಗಾಣಿಗ! Viswanatha Bhaskara Ganiga

ಹೊಸ ದಾಖಲೆಯೊಂದಿಗೆ ಮತ್ತೆ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ ವಿಶ್ವನಾಥ ಭಾಸ್ಕರ ಗಾಣಿಗ! Viswanatha Bhaskara Ganiga
ಹೊಸ ದಾಖಲೆಯೊಂದಿಗೆ ಮತ್ತೆ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ ವಿಶ್ವನಾಥ ಭಾಸ್ಕರ ಗಾಣಿಗ! Viswanatha Bhaskara Ganiga
Published on: 

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಪವರ್​ಲಿಫ್ಟಿಂಗ್​ ಚಾಂಪಿಯನ್​ ಆಗಿ ಹೊರಹೊಮ್ಮಿದ ವಿಶ್ವನಾಥ ಭಾಸ್ಕರ ಗಾಣಿಗ
  • ಉತ್ತರಪ್ರದೇಶದಲ್ಲಿ ನಡೆದ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಅದ್ಭುತ ಸಾಧನೆ
  • ಡೆಡ್​ಲಿಫ್ಟ್​ನಲ್ಲಿ 337.5 ಕೆ.ಜಿ ಭಾರ ಎತ್ತಿ ನೂತನ ರಾಷ್ಟ್ರೀಯ ದಾಖಲೆ ನಿರ್ಮಾಣ
  • ವಿಶ್ವನಾಥ ಗಾಣಿಗ ಒಟ್ಟು 885 ಕೆ.ಜಿ ಭಾರ ಎತ್ತಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು
ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದ ಪವರ್​ಲಿಫ್ಟರ್​ ವಿಶ್ವನಾಥ ಭಾಸ್ಕರ ಗಾಣಿಗ ( Viswanatha Bhaskara Ganiga ) ಅವರು ಹೊಸ ದಾಖಲೆಯೊಂದಿಗೆ ಮತ್ತೆ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಉತ್ತರಪ್ರದೇಶದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಇಕ್ವಿಪ್ಡ್​ ಸೀನಿಯರ್ ಪವರ್​ಲಿಫ್ಟಿಂಗ್​ ಚಾಂಪಿಯನ್​ಷಿಪ್​ನಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿ ಈ ಸಾಧನೆ ಮಾಡಿದ್ದಾರೆ.
ವಿಶ್ವನಾಥ ಭಾಸ್ಕರ ಗಾಣಿಗ ಅವರು 105 ಕೆ.ಜಿ. ವಿಭಾಗದಲ್ಲಿ ಬೆಂಚ್​ಪ್ರೆಸ್​ನಲ್ಲಿ 222.5 ಕೆ.ಜಿ. ಭಾರ ಎತ್ತಿ ಕಂಚಿನ ಪದಕ, ಡೆಡ್​ಲಿಫ್ಟ್​ನಲ್ಲಿ 337.5 ಕೆ.ಜಿ. ಭಾರ ಎತ್ತಿ ನೂತನ ರಾಷ್ಟ್ರೀಯ ದಾಖಲೆ ಮಾಡುವುದರ ಜೊತೆಗೆ, ಚಿನ್ನದ ಪದಕ ಪಡೆದು 105 ಕೆ.ಜಿ. ವಿಭಾಗದಲ್ಲಿ ಒಟ್ಟು 885 ಕೆ.ಜಿ. ಭಾರ ಎತ್ತಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಉತ್ತರಪ್ರದೇಶದ ಗಾಜಿಪುರ್​ನಲ್ಲಿ ಆಗಸ್ಟ್​ 29ರಿಂದ ಸೆಪ್ಟೆಂಬರ್​ 3ರ ವರೆಗೆ ಈ ಚಾಂಪಿಯನ್​ಷಿಪ್ ನಡೆದಿದೆ.
ಇದರೊಂದಿಗೆ ವಿಶ್ವನಾಥ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ 6 ಹಾಗೂ ರಾಷ್ಟ್ರೀಯ ಮಟ್ಟದಲ್ಲಿ 26 ಸೇರಿದಂತೆ ಒಟ್ಟು 32 ಚಿನ್ನದ ಪದಕಗಳನ್ನು ಗಳಿಸಿದಂತಾಗಿದೆ. ಇದರೊಂದಿಗೆ ಅವರು ಎರಡು ರಾಷ್ಟ್ರೀಯ ಮಟ್ಟದ ದಾಖಲೆ ಮಾಡಿದಂತೆಯೂ ಆಗಿದೆ. ಈ ಹಿಂದೆ 105 ಕೆ.ಜಿ. ವಿಭಾಗದಲ್ಲಿ 327.5 ಕೆ.ಜಿ. ಕ್ಲಾಸಿಕ್ ಡೆಡ್​ಲಿಫ್ಟ್ ಮಾಡಿ ರಾಷ್ಟ್ರೀಯ ದಾಖಲೆ ಮಾಡಿದ್ದಾರೆ.
ಮೂಲತಃ ಉಡುಪಿ ಜಿಲ್ಲೆ ಕುಂದಾಪುರದ ಬಾಳಿಕೆರೆ ನಿವಾಸಿ ಆಗಿರುವ ವಿಶ್ವನಾಥ, ಬೆಂಗಳೂರಿನ ಜೆ.ಪಿ.ನಗರದ ಬಾಲಾರ್ಕ ಫಿಟ್​ನೆಸ್​ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net