ರಾಜ್ಯಮಟ್ಟದ ಪವರ್​ಲಿಫ್ಟಿಂಗ್​ ಚಾಂಪಿಯನ್​ಷಿಪ್​ನಲ್ಲಿ ವಿಶ್ವನಾಥ ಭಾಸ್ಕರ್​ಗೆ ಚಿನ್ನ: ಬಾಲಾರ್ಕ ಫಿಟ್​ನೆಸ್​​ನ ಮೂವರು ರಾಷ್ಟ್ರಮಟ್ಟಕ್ಕೆ ಆಯ್ಕೆ

ರಾಜ್ಯಮಟ್ಟದ ಪವರ್​ಲಿಫ್ಟಿಂಗ್​ ಚಾಂಪಿಯನ್​​ಶಿಪ್​ನಲ್ಲಿ ಚಿನ್ನದ ಪದಕ
ರಾಜ್ಯಮಟ್ಟದ ಪವರ್​ಲಿಫ್ಟಿಂಗ್​ ಚಾಂಪಿಯನ್​​ಶಿಪ್​ನಲ್ಲಿ ಚಿನ್ನದ ಪದಕ
Published on
ಬೆಂಗಳೂರು: ಮಂಗಳೂರಿನ ಕಿನ್ನಿಗೋಳಿಯಲ್ಲಿ ಮೇ 1ರಿಂದ ಮೇ 3ರವರೆಗೆ ನಡೆದ ಸೀನಿಯರ್ ಹಾಗೂ ಜೂನಿಯರ್ ರಾಜ್ಯ ಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬಾಲಾರ್ಕ ಫಿಟ್ನೆಸ್‌ನ ವಿಶ್ವನಾಥ ಭಾಸ್ಕರ್ ಗಾಣಿಗ ಅವರು 105 ಕೆಜಿ ವಿಭಾಗದಲ್ಲಿ ಸ್ಕ್ವಾಟ್‌ನಲ್ಲಿ 322.5 ಕೆಜಿ, ಬೆಂಚ್‌ಪ್ರೆಸ್‌ನಲ್ಲಿ 215 ಕೆಜಿ ಹಾಗೂ ಡೆಡ್‌ಲಿಫ್ಟ್‌ನಲ್ಲಿ 327.5 ಕೆಜಿ. ಭಾರ ಎತ್ತಿ ಒಟ್ಟು 865 ಕೆಜಿ. ಸಾಧನೆ ಮಾಡಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಹಾಗೆಯೇ ಬಾಲಾರ್ಕ ಫಿಟ್ನೆಸ್‌ನ ದಿಶಾ ಮೋಹನ್ 63 ಕೆಜಿ ಜೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ದೇವಿಕಾ ದೇಸಾಯಿ ಅವರು 84ಕ್ಕೂ ಅಧಿಕ ತೂಕದ ಜೂನಿಯರ್ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಈ ಸಾಧನೆಯೊಂದಿಗೆ ಇವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net