PHOTOS| ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ವಿಷ್ಣು ವಿಶಾಲ್-ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ!​​

Jwala Vishnu
Published on

ಹೈದರಾಬಾದ್​: ಹಲವು ದಿನಗಳಿಂದ ಡೇಟಿಂಗ್​ನಿಂದ ಸುದ್ದಿಯಾಗಿದ್ದ ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಮತ್ತು ಕಾಲಿವುಡ್​ ನಟ ವಿಷ್ಣು ವಿಶಾಲ್ ಗುರುವಾರ ಹಸೆಮಣೆ ಏರಿದ್ದಾರೆ. ವಿಶೇಷ ಅಂದರೆ, ಇದು ಇಬ್ಬರಿಗೂ ಎರಡನೇ ಮದುವೆ.

ಕರೊನಾ ಹಿನ್ನೆಲೆಯಲ್ಲಿ ಕೇವಲ ಆಪ್ತರ ಸಮ್ಮುಖದಲ್ಲೇ ಮದುವೆ ಸರಳವಾಗಿ ಮುತ್ತಿನ ನಗರಿ ಹೈದರಾಬಾದ್​ನಲ್ಲಿ ನಡೆದಿದೆ. ಇದೀಗ ಸ್ಟಾರ್​ ಜೋಡಿಯ ವಿವಾಹ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅಭಿಮಾನಿಗಳು ನವಜೋಡಿಗೆ ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ. ತಾರಾಜೋಡಿಯ ಸರಳ ವಿವಾಹದ ಅದ್ಧೂರಿ ಫೋಟೋಗಳನ್ನು ನೀವಿಲ್ಲಿ ನೋಡಬಹುದಾಗಿದೆ.

2020ರ ಸೆಪ್ಟೆಂಬರ್‌ 7ರಂದು ಜ್ವಾಲಾ ಅವರ 37ನೇ ಜನ್ಮದಿನದಂದು ವಿಶಾಲ್​ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಅದೇ ದಿನ ಇಬ್ಬರ ನಿಶ್ಚಿತಾರ್ಥವು ಆಗಿದೆ. ಬ್ಯಾಡ್ಮಿಂಟನ್ ಆಟಗಾರ ಚೇತನ್ ಆನಂದ್ ಅವರನ್ನು ವರಿಸಿದ್ದ ಡಬಲ್ಸ್ ಆಟಗಾರ್ತಿ ಜ್ವಾಲಾ ಗುಟ್ಟಾ, 6 ವರ್ಷಗಳ ದಾಂಪತ್ಯ ಜೀವನದ ಬಳಿಕ 2011ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಬಳಿಕ ಮಾಜಿ ಕ್ರಿಕೆಟಿಗ ಮೊಹಮದ್ ಅಜರುದ್ದೀನ ಜತೆಗೂ ಅವರ ಹೆಸರು ಕೇಳಿಬಂದಿತ್ತು. ಕಳೆದೊಂದು ವರ್ಷದಿಂದ ವಿಷ್ಣು ವಿಶಾಲ್ ಜತೆಗೆ ಜ್ವಾಲಾ ಡೇಟಿಂಗ್‌ನಲ್ಲಿದ್ದಾರೆ.

ಇನ್ನು ವಿಷ್ಣು ವಿಶಾಲ್ 2011ರಲ್ಲಿ ತಮಿಳು ನಟ ಕೆ. ನಟರಾಜ್ ಅವರ ಪುತ್ರಿ ರಜಿನಿಯನ್ನು ವಿವಾಹವಾಗಿದ್ದರು. 2017ರಲ್ಲಿ ಪುತ್ರ ಜನಿಸಿದ ಬಳಿಕ 2018ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು.(ಏಜೆನ್ಸೀಸ್​)

Vishnu Jwala 555

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net