12 ವರ್ಷಗಳ ಬಳಿಕ ರಣಜಿ ಪಂದ್ಯಕ್ಕಿಳಿದ ವಿರಾಟ್​; ಅಭಿಮಾನಿಗಳ ನುಕು ನುಗ್ಗಲು: ಮೈದಾನಕ್ಕೆ ನುಗ್ಗಿ ಕಿಂಗ್​​ ಕೊಹ್ಲಿ ಕಾಲಿಗೆರಗಿದ ಫ್ಯಾನ್​! | King Kohli

dk (32) (2)
Published on

King Kohli: ಟೀಮ್​ ಇಂಡಿಯಾದ ದಿಗ್ಗಜ, ರನ್​ ಮಿಷನ್​ ವಿರಾಟ್​ ಕೊಹ್ಲಿ 12 ವರ್ಷಗಳ ಬಳಿಕ ರಣಜಿ ಟ್ರೋಫಿ ಆಡಲು ಮರಳಿರುವುದರಿಂದ ಅವರನ್ನು ನೋಡಲು ಸಾಕಷ್ಟು ಅಭಿಮಾನಿಗಳು ದೆಹಲಿಯ ಅರುಣ್ ಜಟ್ಲಿ ಮೈದಾನದಲ್ಲಿ ನೆರದಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ಕ್ರೀಡಾಂಗಣಕ್ಕೆ ನುಗ್ಗಿ ಕೊಹ್ಲಿ ಕಾಲಿಗೆರಗಿ ನಮಸ್ಕರಿಸಿದ್ದಾನೆ. ಇದೀಗ ಇದರ ವಿಡಿಯೋ ಕ್ಲಿಪ್​ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿರಾಟ್​ 12 ವರ್ಷಗಳ ಬಳಿಕ ದೆಹಲಿ ಪರ ಕಣಕ್ಕಿಳಿದ್ದು, ದೆಹಲಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ, ಅಲ್ಲದೆ, ಮುಂಜಾನೆಯಿಂದಲೇ ಅಪಾರ ಅಭಿಮಾನಿಗಳು ಸ್ಟೇಡಿಯಂನತ್ತ ಧಾವಿಸುತ್ತಿದ್ದಾರೆ. ಕ್ರೀಡಾಂಗಣದ ಹೊರಗೆ ಭಾರಿ ಸಂಖ್ಯೆಯಲ್ಲಿ ಫ್ಯಾನ್​​ ಜಮಾಯಿಸಿದ್ದು, ಬರೊಬ್ಬರಿ 2 ಕಿಲೊಮೀಟರ್​ವರೆಗೂ ಸರದಿ ಸಾಲಲ್ಲಿ ಕ್ರಿಕೆಟ್​ ಅಭಿಮಾನಿಗಳು ನಿಂತಿದ್ದಾರೆ. ಅಲ್ಲದೆ ಅಭಿಮಾನಿಗಳ  ನುಕು ನುಗ್ಗಲು ಏರ್ಪಟ್ಟಿದೆ ಎಂದು ವರದಿಯಾಗಿದೆ. ಭಾರಿ ಪ್ರಮಾಣದಲ್ಲಿ ಪ್ಯಾನ್ಸ್​ ನೆರೆದಿರುವ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ಕಾಲೆಗೆರಗಿದ ಅಭಿಮಾನಿ

ರಣಜಿ ಪಂದ್ಯ ನಡೆಯುತ್ತಿರುವಾ ಮೈದಾನಕ್ಕೆ ನುಗ್ಗಿದ ಅಭಿಮಾನಿಯೊಬ್ಬ ನೇರವಾಗಿ ಕೊಹ್ಲಿ ಇದ್ದ ಕಡೆ ಹೋಗಿ ವಿರಾಟ್​ ಕಾಲಿಗೆರಗಿ ನಮಸ್ಕಾರ ಮಾಡಿದ್ದಾನೆ. ಕೂಡಲೇ ಎಚ್ಚರ ಭದ್ರತಾ ಸಿಬ್ಬಂದಿಗಳು ಆತನನ್ನು ಹೊರ ಕಳುಹಿಸದರು. ಇದೀಗ ಈ ವಿಡಿಯೋ ಸಖತ್​ ಸದ್ದು ಮಾಡುತ್ತಿದೆ.

ಸದ್ಯಕ್ಕೆ ದೆಹಲಿ ಮತ್ತು ರೈಲ್ವೆಸ್​ ತಂಡಗಳ ನಡುವಿನ ಪಂದ್ಯ ನಡೆಯುತ್ತಿದ್ದು, ರೈಲ್ವೆಸ್​ ಬ್ಯಾಟಿಂಗ್​(ಇನ್ನಿಂಗ್ಸ್​) ಬಳಿಕ ಕೊಹ್ಲಿಯ ಬ್ಯಾಟಿಂಗ್​ ನೋಡಬಹದು. ಇದಕ್ಕಾಗಿ ಲಕ್ಷಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net