ವಿರಾಟ್ ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್ ನೋಡಿ 'ವಾವ್' ಎಂದ ಫ್ಯಾನ್ಸ್!

Virat Kohli
Published on

ಬ್ರಿಸ್ಬೇನ್: ಸದ್ಯದಲ್ಲೇ ಆರಂಭವಾಗಲಿರುವ ಟಿ-20 ವಿಶ್ವಕಪ್ ಹಿನ್ನಲೆಯಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯ ಆಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 186 ರನ್ ಗಳಿಸಿತು. 187ರನ್ ಗಳ ಗುರಿ ಬೆನ್ನು ಹತ್ತಿದ ಆಸ್ಟ್ರೇಲಿಯಾ, ಕೊನೆಯ ಓವರ್​ನಲ್ಲಿ ಮೊಹಮ್ಮದ್ ಶಮಿ ಮಾಡಿದ ಹರಿತ ಬೌಲಿಂಗ್ ದಾಳಿಯಿಂದ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.

ಈ ಪಂದ್ಯದ ಕೊನೆಯ ಓವರ್​ನಲ್ಲಿ ವಿರಾಟ್​ ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್ ಇದೀಗ ಸದ್ದಾಗುತ್ತಿದೆ. ಮೊಹಮ್ಮದ್ ಶಮಿ ಓವರ್​ನ ಮೂರನೇ ಬಾಲ್​ನ್ನು ಪ್ಯಾಟ್ ಕಮ್ಮಿಂಗ್ಸ್ ಸಿಕ್ಸರ್ ಬಾರಿಸಲು ಮುಂದಾಗುತ್ತಾರೆ. ಈ ವೇಳೆ ಬೌಂಡರಿ ಲೈನ್​ ಬಳಿ ಇದ್ದ ವಿರಾಟ್ ಕೊಹ್ಲಿ, ಒಂದೇ ಕೈಯ್ಯಲ್ಲಿ ಅದ್ಭುತವಾಗಿ ಕ್ಯಾಚ್ ಹಿಡಿಯುತ್ತಾರೆ. ವಿರಾಟ್​ ಕೊಹ್ಲಿ ಹಿಡಿದ ಕ್ಯಾಚ್ ನೋಡಿ ಅಭಿಮಾನಿಗಳು ವಾವ್ ಎಂದಿದ್ದಾರೆ.

ಕೊನೆಯ 4 ಬಾಲ್​ಗಳಲ್ಲಿ ಆಸ್ಟ್ರೇಲಿಯಾಗೆ ಗೆಲ್ಲಲು 7 ರನ್​ಗಳ ಅವಶ್ಯಕತೆ ಇತ್ತು. ಈ ವೇಳೆ ವಿರಾಟ್ ಕೊಹ್ಲಿ ಕ್ಯಾಚ್ ಹಿಡಿಯದೇ ಹೋಗಿದ್ದರೆ ಸಿಕ್ಸರ್ ಮೂಲಕ ಆಸ್ಟ್ರೇಲಿಯಾಗೆ 6 ರನ್ ಲಭ್ಯವಾಗುತ್ತಿತ್ತು. ಇದೀಗ ವಿರಾಟ್ ಹಿಡಿದ ಕ್ಯಾಚ್, ಮ್ಯಾಚ್​​ ಗೆಲುವಿನ ಟರ್ನಿಂಗ್​ ಪಾಯಿಂಟ್ ಆಗಿದೆ. ಕೊನೆಯ ಓವರ್​ನಲ್ಲಿ ಮ್ಯಾಜಿಕ್ ಮಾಡಿದ ಮೊಹಮ್ಮದ್ ಶಮಿ 4 ಎಸೆತಗಳಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಮಿಂಚಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net