ಬಲೂಚಿಸ್ತಾನ ಅಭಿಮಾನಿಯಿಂದ ಮರಳಿನಲ್ಲಿ ಮೂಡಿ ಬಂತು ಕೊಹ್ಲಿಯ ಚಿತ್ರ...

Kohli (2)
Published on

ನವದೆಹಲಿ: ಭಾರತ ತಂಡದ ಚೇಸಿಂಗ್ ಕಿಂಗ್ ವಿರಾಟ್ ಕೊಹ್ಲಿಗೆ ವಿಶ್ವದಾದ್ಯಂತ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಪ್ರತಿ ಬಾರಿಯೂ ತಮ್ಮದೇ ಶೈಲಿಯಲ್ಲಿ ಕೊಹ್ಲಿಯನ್ನು ಬೆಂಬಲಿಸುತ್ತಾರೆ. ಇದೀಗ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅದ್ಭುತ ನಿರ್ವಹಣೆ ತೋರಿದ ವಿರಾಟ್ ಕೊಹ್ಲಿ ಬ್ಯಾಟಿಂಗ್​ಗೆ ಎಲ್ಲರೂ ಫಿದಾ ಆಗಿದ್ದಾರೆ. ಇದೀಗ ಕೊಹ್ಲಿಯನ್ನು ಬೆಂಬಲಿಸಲು ಬಲೂಚಿಸ್ತಾನದ ಅಭಿಮಾನಿಯೊಬ್ಬರು ಮರಳಿನಲ್ಲಿ ಕೊಹ್ಲಿಯ ಚಿತ್ರವನ್ನು ಬಿಡಿಸಿದ್ದಾರೆ.

ಬಲೂಚಿಸ್ತಾನದ ಸಮುದ್ರ ಕಿನಾರೆಯಲ್ಲಿ ಮೂಡಿದ ವಿರಾಟ್ ಕೊಹ್ಲಿಯ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಿತ್ರದ ನೋಡಿದ ಎಲ್ಲರೂ ಕಲಾವಿದರ ಕೈಚಳಕವನ್ನು ಮೆಚ್ಚಿಕೊಂಡಿದ್ದಾರೆ.

ಬಲೂಚಿಸ್ತಾನದ ಚಿತ್ರಕಾರ ಸಮೀರ್ ಶೌಕತ್ ಮತ್ತು ಗೆಳೆಯರು ಮರಳಿನ ಮೇಲೆ ಕೊಹ್ಲಿಯ ಚಿತ್ರ ರಚಿಸಿದ್ದಾರೆ. ಜತೆಗೆ 'ಲವ್ ಫ್ರಮ್ ಆರ್ ಎ ಗದ್ದಾನಿ' ಎಂದು ಬರೆದುಕೊಂಡಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net