VIDEO | ನಾಲಿಗೆಯಿಂದ ವಿರಾಟ್ ಕೊಹ್ಲಿಯ ಭಾವಚಿತ್ರ ಬಿಡಿಸಿದ ಕಲಾವಿದ!

virat
Published on

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ವಿರಾಟ್ ಕೊಹ್ಲಿ ಅವರಿಗೆ ಪ್ರಪಂಚದಾದ್ಯಂತದ ಅಭಿಮಾನಿಗಳಿದ್ದಾರೆ. ಅಪಾರ ಪ್ರಮಾಣದ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿರುವ ವಿರಾಟ್ ಕೊಹ್ಲಿಯನ್ನು ಆರಾಧಿಸುವ ಕೋಟ್ಯಾಂತರ ಅಭಿಮಾನಿಗಳ ಪೈಕಿ ಇದೀಗ ಆಪ್ಪಟ ಅಭಿಮಾನಿಯೊಬ್ಬ ವಿಶೇಷವಾಗಿ ತಮ್ಮ ನೆಚ್ಚಿನ ಕ್ರೀಡಾಪಟುವಿಗೆ ಗೌರವ ಸಲ್ಲಿಸಿದ್ದಾರೆ.

ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿ ಮತ್ತು ಕಲಾವಿದ 22 ಸೆಕೆಂಡ್‌ಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿ ತಮ್ಮ ನಾಲಿಗೆಗೆ ಬಣ್ಣವನ್ನು ಸವರಿಕೊಂಡು ಬಿಳಿ ಹಾಳೆಯ ಮೇಲೆ ವಿರಾಟ್ ಕೊಹ್ಲಿಯ ಕಲಾಕೃತಿ ಅನಾವರಣ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋಗೆ ಮೆಚ್ಚಿಗೆ ವ್ಯಕ್ತವಾಗಿದೆ.

ಸದ್ಯ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ವಿರಾಟ್ ಕೊಹ್ಲಿ, ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ಅದ್ಭುತ ಟ್ರ್ಯಾಕ್ ರೆಕಾರ್ಡ್‌ ಹೊಂದಿದ್ದಾರೆ. ಆರ್ ಪ್ರೇಮದಾಸ್ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ 8 ಪಂದ್ಯಗಳನ್ನಾಡಿ 103.80 ಬ್ಯಾಟಿಂಗ್ ಸರಾಸರಿಯಲ್ಲಿ 519 ರನ್ ಬಾರಿಸಿದ್ದಾರೆ.

ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ  ಪಾಕಿಸ್ತಾನ ತಂಡವನ್ನು ಎದುರಿಸುವುದಕ್ಕೂ ಮೊದಲು ಭಾರತದ ಸೂಪರ್​ ಸ್ಟಾರ್ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿಗೆ ಶ್ರೀಲಂಕಾದ ಯುವ ಆಟಗಾರ​ ಚಂದ್ರಮೋಹನ್ ಕೃಷ್ಣಂತ್, ಬೆಳ್ಳಿ ಬ್ಯಾಟ್​ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ ಈ ಆಟಗಾರ ಲಂಕಾದ ಪ್ರಧಾನದಲ್ಲಿಲ್ಲ, ಬದಲಾಗಿ ನೆಟ್​​ ಬೌಲರ್​ ಎಂಬುದು ವಿಶೇಷ.

ಲಂಕಾದ ನೆಟ್​ ಬೌಲರ್​ ಕೊಟ್ಟಿರುವ ಬೆಳ್ಳಿ ಬ್ಯಾಟ್​ ವಿಶೇಷವಾದ್ದದ್ದು. ಸದ್ಯ ಕೊಹ್ಲಿ ಈವರೆಗೂ ಸಿಡಿಸಿರುವ 76 ಅಂತಾರಾಷ್ಟ್ರೀಯ ಶತಕಗಳ ಕುರಿತು ಈ ಬ್ಯಾಟ್ ಮೇಲೆ ಬರೆಸಲಾಗಿದೆ. ಶತಕಗಳ ಸಂಪೂರ್ಣ ಮಾಹಿತಿಯನ್ನು ಈ ಬ್ಯಾಟ್ ಮೇಲೆ ಮುದ್ರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net