ಅಭ್ಯಾಸ ಪಂದ್ಯದಲ್ಲಿ ಕೆಎಲ್ ರಾಹುಲ್ ಟೀಮ್‌ಗೆ ಸೋಲುಣಿಸಿದ ವಿರಾಟ್ ಕೊಹ್ಲಿ ಬಳಗ

kohli rahul web
Published on

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಪೂರ್ವಸಿದ್ಧತೆಯ ಭಾಗವಾಗಿ ಭಾರತೀಯ ಕ್ರಿಕೆಟಿಗರು 2 ತಂಡಗಳಾಗಿ ಆಡಿದ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ಸಿಕೆ ನಾಯ್ಡು ಇಲೆವೆನ್ ತಂಡ ಕನ್ನಡಿಗ ಕೆಎಲ್ ರಾಹುಲ್ ನೇತೃತ್ವದ ರಣಜಿತ್‌ಸಿನ್ಹಾಜಿ ಇಲೆವೆನ್ ತಂಡದ ವಿರುದ್ಧ 5 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ.

ತಲಾ 40 ಓವರ್‌ಗಳ ಪಂದ್ಯ ಮಳೆ ಅಡಚಣೆಯನ್ನೂ ಎದುರಿಸಿತು. ರಾಹುಲ್ ತಂಡದ ಪರ ಶಿಖರ್ ಧವನ್-ಮಯಾಂಕ್ ಅಗರ್ವಾಲ್ ಇನಿಂಗ್ಸ್ ಆರಂಭಿಸಿದರು. ನಾಯಕ ಕೆಎಲ್ ರಾಹುಲ್ 66 ಎಸೆತಗಳಲ್ಲಿ 83 ರನ್ ಸಿಡಿಸಿ ತಮ್ಮ ತಂಡ 235 ರನ್ ಪೇರಿಸಲು ನೆರವಾದರು. ಪ್ರತಿಯಾಗಿ ಕೊಹ್ಲಿ ತಂಡ 26 ಎಸೆತ ಬಾಕಿ ಇರುವಂತೆಯೇ ಜಯಿಸಿತು. ಪೃಥ್ವಿ ಷಾ ಮತ್ತು ಶುಭಮಾನ್ ಗಿಲ್ ಇನಿಂಗ್ಸ್ ಆರಂಭಿಸಿದರು. ಕೊಹ್ಲಿ 58 ಎಸೆತಗಳಲ್ಲಿ 91 ರನ್ ಬಾರಿಸಿ ಗೆಲುವು ತಂದರು.

ಭಾರತ ತಂಡ ಸದ್ಯ ಆಸ್ಟ್ರೇಲಿಯಾದಲ್ಲಿ ಕ್ವಾರಂಟೈನ್‌ನಲ್ಲಿದ್ದು, ನವೆಂಬರ್ 27ರಿಂದ ಏಕದಿನ ಸರಣಿ ಆರಂಭವಾಗಲಿದೆ. ಬಳಿಕ 3 ಪಂದ್ಯಗಳ ಟಿ20 ಸರಣಿ ಮತ್ತು 4 ಪಂದ್ಯಗಳ ಟೆಸ್ಟ್ ಸರಣಿಯೂ ನಡೆಯಲಿದೆ. ಸೀಮಿತ ಓವರ್​ ಸರಣಿಯಲ್ಲಿ ಕೆಎಲ್​ ರಾಹುಲ್​ ಇದೇ ಮೊದಲ ಬಾರಿಗೆ ಉಪನಾಯಕರಾಗಿ ನಾಯಕ ವಿರಾಟ್​ ಕೊಹ್ಲಿ ಅವರಿಗೆ ನೆರವಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net