

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2025ರ(IPL 2025) ಸೀಸನ್‌ಗೆ ಆಟಗಾರರನ್ನು ಉಳಿಸಿಕೊಳ್ಳುವ ಕುರಿತ ಸುದ್ದಿಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಸಂತೋಷದ ಸುದ್ದಿಯೊಂದು ಹೊರಬಿದ್ದಿದೆ. ಐಪಿಎಲ್ನ ಮುಂದಿನ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕರಾಗಲು ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ.
ನಾಯಕತ್ವವನ್ನು ವಹಿಸಿಕೊಳ್ಳುವ ಬಗ್ಗೆ ಕೊಹ್ಲಿ ಈಗಾಗಲೇ ಮ್ಯಾನೇಜ್‌ಮೆಂಟ್‌ನೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಐಪಿಎಲ್ ಉಳಿಸಿಕೊಳ್ಳುವ ಗಡುವು ಮುಗಿಯುವ ಮುನ್ನವೇ ಈ ದೊಡ್ಡ ಹೇಳಿಕೆ ಹೊರಬಿದ್ದಿದ್ದು, ಈಗ ಇದು ಆಗುತ್ತದೋ ಇಲ್ಲವೋ ಎಂಬುದು ನವೆಂಬರ್‌ನಲ್ಲಿ ನಡೆಯಲಿರುವ ಮೆಗಾ ಹರಾಜಿನ ನಂತರವಷ್ಟೇ ತಿಳಿಯಲಿದೆ.
ಮೂರು ಸೀಸನ್‌ಗಳ ಹಿಂದೆ 2013 ರಿಂದ 2021ರವರೆಗೆ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಬೆಂಗಳೂರು ತಂಡವನ್ನು ತಮ್ಮ ನಾಯಕತ್ವದಲ್ಲಿ ಮುನ್ನಡೆಸಿದರು. ಕೊಹ್ಲಿ ಐಪಿಎಲ್ 2022ರ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ದಕ್ಷಿಣ ಆಫ್ರಿಕಾದ ಫಾಫ್ ಡುಪ್ಲೆಸಿಸ್ ಅವರನ್ನು ಆರ್‌ಸಿಬಿ ತಂಡ ನಾಯಕರನ್ನಾಗಿ ನೇಮಿಸಲಾಯಿತು. ರಾಜೀನಾಮೆ ನೀಡಿದ ಬಳಿಕ ಅಭಿಮಾನಿಗಳಿ ತಮ್ಮ ನಿರ್ಧಾರವನ್ನು ತಿಳಿಸಿದ್ದರು.
ಹಲವು ಬಾರಿ ಭರವಸೆ ನೀಡಿದರೂ ಆರ್‌ಸಿಬಿ ಆರಂಭದಿಂದಲೂ ಇದುವರೆಗೆ ಐಪಿಎಲ್ ಗೆದ್ದಿಲ್ಲ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ 2016ರಲ್ಲಿ ಒಮ್ಮೆ ಮಾತ್ರ ಫೈನಲ್ ಆಡಿತು. ಫೈನಲ್ನಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲನ್ನು ಅನುಭವಿಸಿತು. ಒಟ್ಟು 143 ಪಂದ್ಯಗಳಲ್ಲಿ ಕೊಹ್ಲಿ ನಾಯಕತ್ವ ವಹಿಸಿದ್ದು, ಈ ಪೈಕಿ ತಂಡ ಕೇವಲ 66ರಲ್ಲಿ ಗೆದ್ದು 70ರಲ್ಲಿ ಸೋತಿತ್ತು. ಕಳೆದ 3 ಸೀಸನ್‌ಗಳಲ್ಲಿ ಡುಪ್ಲೆಸಿಸ್ ನಾಯಕತ್ವದಲ್ಲಿ ತಂಡವು 2022 ಮತ್ತು 2024ರಲ್ಲಿ ಪ್ಲೇಆಫ್ ಅಹರ್ತೆಯನ್ನು ಪಡೆಯಿತು. ಆದರೆ 2023ರಲ್ಲಿ ಅದನ್ನು ಕಳೆದುಕೊಂಡಿತು.(ಏಜೆನ್ಸೀಸ್)