ಕಳಪೆ ಪ್ರದರ್ಶನದ ಬಗ್ಗೆ ಕೊನೆಗೂ ಮೌನ ಮುರಿದ ಕೊಹ್ಲಿ, ಟ್ವೀಟ್​ ಮಾಡಿ ಹೇಳಿದ್ದೇನು?

Kohli1
Published on

ನವದೆಹಲಿ: ಸದ್ಯ ಕಳಪೆ ಪ್ರದರ್ಶನದಿಂದ ಭಾರೀ ಟೀಕೆಗೊಳಗಾಗಿದ್ದ ವಿರಾಟ್​ ಕೊಹ್ಲಿ ಟೀಕಾಕಾರರಿಗೆ ಖಡಕ್​ ತಿರುಗೇಟು ನೀಡಿದ್ದಾರೆ.ಇದೇ ಮೊದಲ ಬಾರಿಗೆ ಮೌನ ಮುರಿದ ಕೊಹ್ಲಿ ಒಂದೇ ಸಾಲಿನಲ್ಲಿ ಟ್ವೀಟ್​ ಮಾಡುವ ಮೂಲಕ ಎಲ್ಲರ ಬಾಯುಮುಚ್ಚಿಸಿದ್ದಾರೆ. ಅಂದಹಾಗೆ ಕೊಹ್ಲಿ ವಿರುದ್ದ ಇಂತಹ ಟೀಕೆಗಳು ಕೇಳಿಬರಲು ಕಾರಣವಿದೆ.

ಕಳೆದ ವರ್ಷದ ಹಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ ಎಂಬುದೇ ಕೊಹ್ಲಿ ವಿರುದ್ಧ ಟೀಕೆಗಳು ವ್ಯಕ್ತವಾಗಲು ಕಾರಣವಾಗಿತ್ತು. ಅದರಲ್ಲಿ ಹೆಚ್ಚಾಗಿ ಕ್ರಿಕೆಟಿಗರಿಂದಲೇ ಆರೋಪಗಳು ಕೇಳಿಬಂದಿತ್ತು.ಮಾಜಿ ಕ್ರಿಕೆಟಿಗ ಕಪಿಲ್​ ದೇವ್​ ಅವರು ಕೊಹ್ಲಿ ಕುರಿತ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕೊಹ್ಲಿಯನ್ನು ಪಂದ್ಯದಿಂದಲೇ ತೆಗೆಯಬೇಕೆಂಬ ಬೇಡಿಕೆಯನ್ನೂ ಸಹ ಇಟ್ಟಿದ್ದರು. ಇದಾದ ನಂತರವೂ ವೆಸ್ಟ್​ ಇಂಡೀಸ್​ ಪ್ರವಾಸದಿಂದ ಹೊರಗುಳಿದಿರುವ ಕೊಹ್ಲಿ ಬಗ್ಗೆ ಮತ್ತೆ ಟೀಕೆ ಮಾಡಿದ್ದರು.

ಸದ್ಯ ಇವೆಲ್ಲಾ ಟೀಕೆಗಳಿಗೆ ವಿರಾಟ್​ ಕೊಹ್ಲಿ ಕೊನೆಗೂ ಮೌನ ಮುರಿದಿದ್ದಾರೆ. ಒಂದೇ ಸಾಲಿನಲ್ಲಿ ಸೂಕ್ತವಾದ ಚಿತ್ರದೊಂದಿಗೆ ಟ್ವೀಟ್​​ ಮಾಡಿರುವ ಅವರು, ನಾನು ಬಿದ್ದರೆ ಏನು? ಆದರೆ ಪ್ರಿಯತಮೆ, ನೀವು ಹಾರಿದರೆ ಏನು? ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net