

ನವದೆಹಲಿ: ಇದೇ ಡಿ.28ರಂದು ಮೆಲ್ಬೋರ್ನ್ನಲ್ಲಿ ನಡೆದ ಭಾರತ- ಆಸ್ಟ್ರೇಲಿಯಾ ನಡುವಣ ಬಾಕ್ಸಿಂಗ್ ಡೇ ನಾಲ್ಕೇನೆ ಟೆಸ್ಟ್ ಪಂದ್ಯದಲ್ಲಿ ಕಾಂಗೂರು ಬೌಲರ್ಗಳನ್ನು ಬೆಂಡಿತ್ತಿ ಶತಕ ಬಾರಿಸಿದ ಟೀಮ್ ಇಂಡಿಯಾದ ಬ್ಯಾಟರ್ ನಿತೀಶ್ ಕುಮಾರ್ ರೆಡ್ಡಿ, ಹೊಸ ಸಂಚಲವನ್ನೇ ಸೃಷ್ಠಿಸಿದ್ದಾರೆ. ಇವರ ಆಟಕ್ಕೆ ಭಾರತ ಮಾತ್ರವಲ್ಲ ವಿದೇಶಿಗರಿಂದಲೂ ಭಾರೀ ಪ್ರಶಂಶೆ ವ್ಯಕ್ತವಾಗಿದೆ.
ಇವರ ಆಟಕ್ಕೆ ಅನೇಕ ಭಾರತ ಆಟಗಾರರು ಕೂಡ ತಲೆಬಾಗಿದ್ದು. ಮುಂದಿನ ದಿನಗಳಲ್ಲಿ ತಂಡದ ಭರವಸೆಯ ಆಟಗಾರ ಎಂದು ನಿತೀಶ್ ಬಿಂಬಿಸಿಕೊಳ್ಳುತ್ತಿದ್ದಾರೆ. ಇದೀಗ, ನಿತೀಶ್ ಕುಮಾರ್ ರೆಡ್ಡಿ ತಮ್ಮ ಇಂತಹ ಆಟಕ್ಕೆ ಯಾರು ಸ್ಫೂರ್ತಿ ಎಂದು ಹೇಳಿದ್ದಾರೆ.
ಹೌದು, ಸಂದರ್ಶವೊಂದರಲ್ಲಿ ಮಾತನಾಡಿದ ನಿತೀಶ್, ''ಇದು ನನಗೆ ತುಂಬಾ ಕೃತಜ್ಞತೆಯ ಕ್ಷಣ. ನನಗೆ ವಿರಾಟ್ ಕೊಹ್ಲಿ(Virat Kohli) ಎಂದರೆ ಇಷ್ಟ. ಮೊದಲಿನಿಂದಲೂ ವಿರಾಟ್ ಆಟ ನೋಡಿಯೇ ಬೆಳದಿದ್ದೇನೆ. ನನಗೆ ವಿರಾಟ್ ಕೊಹ್ಲಿ ಅವರೇ ಆರಾಧ್ಯದೈವ'' ಎಂದು ಹೇಳಿದ್ದಾರೆ.
''ನನಗೆ ಅಂತಿಮವಾಗಿ ಅವರೊಂದಿಗಿ ಆಟವಾಡುವ ಅವಕಾಶ ಸಿಕ್ಕಿದೆ. ನಾನು ಪರ್ತ್ನ ಕ್ರಿಸ್ನಲ್ಲಿದ್ದಾಗ ಕೊಹ್ಲಿ ನೂರು ರನ್ ಬಾರಿಸಿದ್ದರು. ನನಗೆ ಅದು ತುಂಬಾ ಸಂತೋಷದ ಕ್ಷಣವಾಗಿತ್ತು. ಅವರಂತೆಯೇ ನಾನು ಇಂದು ನೂರು ಹೊಡಿದ್ದೇನೆ. ಕೊಹ್ಲಿಯೇ ಸ್ವತ ನನ್ನ ಹತ್ರ ಬಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ನೀನು ನನಗಿಂತ ಚೆನ್ನಾಗಿ ಆಡಿದ್ದೀರಿ. ಅಲ್ಲದೇ, ಆಟದ ಗತಿಯನ್ನೇ ಬದಲಿಸುವ ಸಾಮರ್ಥ್ಯ ನಿಮ್ಮ ಬಳಿ ಇದೆ ಎಂದು ಅವರು ನನ್ನನ್ನು ಹೊಗಳಿದರು. ಇದು ನನ್ನ ಜೀವನದ ಸಂತೋಷದ ಕ್ಷಣ ಎಂದು ಭಾವಿಸಿದ್ದೇನೆ'' ಎಂದು ನಿತೀಶ್ ಹೇಳಿದ್ದಾರೆ.
ಇನ್ನು ನಿತೀಶ್ ಕುಮಾರ್ ರೆಡ್ಡಿ 58.60 ಸರಾಸರಿಯಲ್ಲಿ ನಾಲ್ಕು ಪಂದ್ಯಗಳು ಮತ್ತು ಆರು ಇನ್ನಿಂಗ್ಸ್‌ಗಳಲ್ಲಿ 293 ರನ್‌ಗಳನ್ನು ಗಳಿಸುವುದರೊಂದಿಗೆ (ಶತಕದೊಂದಿಗೆ) ಸರಣಿಯಲ್ಲಿ ಭಾರತದ ಅತಿ ಹೆಚ್ಚು ರನ್ ಗಳಿಸಿದವರು ಬ್ಯಾಟರ್ ಎನಿಸಿಕೊಂಡಿದ್ದಾರೆ. (ಏಜೆನ್ಸೀಸ್).