ಬಾಂಗ್ಲಾ ಕ್ರಿಕೆಟಿಗರಿಗೆ ಭಾರತೀಯರೇ ಸ್ಫೂರ್ತಿ..!

Virat-Kohli-and-Tamim_web
Published on

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ವಲಯದಲ್ಲಿ ಭಾರತ ತಂಡದ್ದೆ ಒಂದು ತೂಕ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ನಂಥ ಬಲಿಷ್ಠ ತಂಡಗಳಲ್ಲಿ ಸ್ಟಾರ್ ಆಟಗಾರರಿದ್ದರೂ ವಿಶ್ವದ ಬಹುತೇಕ ಯುವ ಕ್ರಿಕೆಟಿಗರ ಪಾಲಿಗೆ ಭಾರತೀಯ ಆಟಗಾರರೇ ಮಾದರಿ. ಫಿಟ್ನೆಸ್ ಕುರಿತು ವಿರಾಟ್ ಕೊಹ್ಲಿ ಸಾರಥ್ಯದ ತಂಡದ ಆಟಗಾರರೇ ನೆರೆಯ ಬಾಂಗ್ಲಾದೇಶ ಆಟಗಾರರಿಗೆ ಸ್ಫೂರ್ತಿಯಂತೆ. ಈ ಮಾತನ್ನು ಸ್ವತಃ ಬಾಂಗ್ಲಾದ ಹಿರಿಯ ಆಟಗಾರ ತಮೀಮ್ ಇಕ್ಬಾಲ್ ಹೇಳಿಕೊಂಡಿದ್ದಾರೆ.

ಭಾರತದಲ್ಲಿ ನಡೆಯುವ ಚಟುವಟಿಕೆಗಳನ್ನು ಸಾಮಾನ್ಯವಾಗಿ ಗಮನಿಸುತ್ತಾ ಇರುತ್ತೇವೆ. ಅದರಲೂ ಕ್ರಿಕೆಟ್ ಕುರಿತು ಸಾಕಷ್ಟು ಗಮನ ನೀಡುತ್ತೇವೆ. ಭಾರತೀಯ ಕ್ರಿಕೆಟಿಗರ ಫಿಟ್ನೆಸ್ ಮಂತ್ರವನ್ನು ತಂಡದ ಎಲ್ಲ ಆಟಗಾರರು ಾಲೋ ಮಾಡುತ್ತಿದ್ದೇವೆ ಎಂದು ತಮೀಮ್ ಹೇಳಿಕೊಂಡಿದ್ದಾರೆ. ಇಎಸ್‌ಪಿಎನ್ ಕ್ರಿಕ್‌ಇನ್ಫೋ ಜತೆಗೆ ಮಾತನಾಡಿದ ಎಡಗೈ ಬ್ಯಾಟ್ಸ್‌ಮನ್ ಕ್ರಿಕೆಟ್ ಜತೆಗೆ ಕೊಹ್ಲಿ ಫಿಟ್ನೆಸ್‌ಗೆ ನೀಡುವ ಮಹತ್ವವನ್ನು ಮೆಚ್ಚಬೇಕು ಎಂದಿದ್ದಾರೆ. ನನಗೆ ಈ ವಿಷಯ ಹಂಚಿಕೊಳ್ಳೊದಕ್ಕೆ ನಾಚಿಕೆಯಾಗುತ್ತಿದೆ. ಏಕೆಂದರೆ, 2-3 ವರ್ಷಗಳ ಹಿಂದೆ ಕೊಹ್ಲಿ ಮೈದಾನದಲ್ಲಿ ಓಡುತ್ತಿದ್ದ ದೃಶ್ಯ, ಜಿಮ್‌ನಲ್ಲಿ ಮಾಡುತ್ತಿದ್ದ ಕಸರತ್ತು ನೋಡಿ ನನಗೆ ನಾಚಿಕೆ ಹುಟ್ಟಿಸಿತು. ನನ್ನ ವಯಸ್ಸಿನ ಹುಡುಗನೊಬ್ಬನ ಮಾಡುತ್ತಿದ್ದ ಟ್ರೈನಿಂಗ್‌ನ ಅರ್ಧದಷ್ಟು ನಾನು ಮಾಡುವುದಿಲ್ಲ. ಕೊಹ್ಲಿ ಮಾಡುವ ಕಸರತ್ತಿನಲ್ಲಿ ಶೇಕಡ 50-60 ಮಾತ್ರ ಮಾಡಬಲ್ಲೇ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net