

ತುಂಬ ಎಕ್ಸ್ಪ್ರೆಸ್ಸಿವ್, ಅಗ್ರೆಸ್ಸಿವ್ ನಾಯಕ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಸದ್ಯ ಐಪಿಎಲ್ನಲ್ಲಿ ಆಡುತ್ತಿದ್ದಾರೆ. ಇದೀಗ ಆರ್ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿಯವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ತುಂಬ ವೈರಲ್ ಆಗಿದೆ.
ಇಂದು ಆರ್ಸಿಬಿ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆಟ ಶುರುವಾಗುವುದಕ್ಕೂ ಮೊದಲು ಕೊಹ್ಲಿ ಮಾಡಿದ ಡ್ಯಾನ್ಸ್ನ ವಿಡಿಯೋ ಇದು. ಟ್ವಿಟರ್ ಬಳಕೆದಾರರಾದ ಜತಿನ್ ಎಂಬುವರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಪಂದ್ಯಕ್ಕೂ ಮೊದಲು ವಿರಾಟ್ ಕೊಹ್ಲಿ ಪಿಚ್ನಲ್ಲಿ ವರ್ಕೌಟ್ ಮಾಡುತ್ತಲೇ ಡ್ಯಾನ್ಸ್ ಮಾಡಿದ್ದಾರೆ. ವಿವಿಧ ರೀತಿಯ ಫನ್ನಿ ಸ್ಟೆಪ್ ಹಾಕಿದ್ದಾರೆ. ಅವರೊಂದಿಗೆ ಇದ್ದ ತಂಡದ ಇತರ ಆಟಗಾರರೂ ಕೂಡ ಅದನ್ನು ನೋಡಿ ನಗುತ್ತ ಎಂಜಾಯ್ ಮಾಡಿದ್ದಾರೆ.
ಕೊಹ್ಲಿಯ ನೃತ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. (ಏಜೆನ್ಸೀಸ್)