ಕಾನ್ಪುರ ಟೆಸ್ಟ್​ ವೇಳೆ ವಿರಾಟ್ ಕೊಹ್ಲಿಗೆ ಡಿಹೈಡ್ರೇಷನ್​; ಹೀಗಿದೆ ಕಾರಣ...

web vk
Published on

ಕಾನ್ಪುರ: ಬಾಂಗ್ಲಾ ವಿರುದ್ಧ ಕಾನ್ಪುರ ಟೆಸ್ಟ್​ನ 4ನೇ ದಿನದಾಟದಲ್ಲಿ 35 ಎಸೆತಗಳಲ್ಲಿ 47 ರನ್​ ಸಿಡಿಸಿ ಭಾರತ ತಂಡ ಪ್ರ ರನ್​ ಸೇರಿಸಲು ನೆರವಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ (Virat Kohli) 50 ನಿಮಿಷಗಳ ಈ ಕಿರು ಇನಿಂಗ್ಸ್​ ವೇಳೆ ಡಿಹೈಡ್ರೇಷನ್​ಗೆ ಒಳಗಾಗಿ ವೈದ್ಯಕಿಯ ಚಿಕಿತ್ಸೆ ಪಡೆದರು. ವಿಶ್ವ ಕ್ರಿಕೆಟ್​ನ ಅತ್ಯಂತ ಫಿಟ್​ ಆಟಗಾರರಲ್ಲಿ ಒಬ್ಬರೆನಿಸಿರುವ ಕೊಹ್ಲಿ ಈ ರೀತಿ ಅಸ್ವಸ್ಥರಾಗಲು, ಅವರು ಕುಡಿಯುವ ಕಪ್ಪು ಬಣ್ಣದ ವಿಶೇಷ ನೀರು ಕಾನ್ಪುರದಲ್ಲಿ ಸಿಗದಿರುವುದೇ ಕಾರಣ ಎನ್ನಲಾಗಿದೆ.

ಕೊಹ್ಲಿ ಯಾವಾಗಲೂ ಫ್ರಾನ್ಸ್​ನಲ್ಲಿ ತಯಾರಾಗುವ ಲೀಟರ್​ಗೆ 4 ಸಾವಿರ ರೂ. ಬೆಲೆ ಹೊಂದಿರುವ ನೈಸರ್ಗಿಕ ನೀರು (ದಿ ಇವಿಯನ್​ ನ್ಯಾಚುರಲ್​ ಸಿಂಗ್​ ವಾಟರ್​) ಕುಡಿಯುತ್ತಾರೆ. ಕಪು$್ಪ ಬಣ್ಣದ ಈ ನೀರು ಹೈಡ್ರೇಷನ್​, ರೋಗನಿರೋಧಕ ಶಕ್ತಿ, ಚರ್ಮದ ತ್ವಚೆ, ತೂಕ ಕಡಿತಕ್ಕೆ ನೆರವಾಗುತ್ತದೆ. ಆದರೆ ಕಾನ್ಪುರದಲ್ಲಿ ಈ ನೀರು ಲಭ್ಯವಿರದ ಕಾರಣ ಕೊಹ್ಲಿ, ರಾಹುಲ್​ ಜತೆಗಿನ ಜತೆಯಾಟದ ವೇಳೆ ಸುಸ್ತಾಗಿ ಕುಳಿತರು. ಕೂಡಲೆ ವೈದ್ಯಕಿಯ ಸಿಬ್ಬಂದಿ ಮೈದಾನಕ್ಕೆ ತೆರಳಿ ಕೊಹ್ಲಿಗೆ ಸೂಕ್ತ ಚಿಕಿತ್ಸೆ ನೀಡಿದರು.

ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಅವರದು 'ಫೇಕ್​ ಫಿಟ್ನೆಸ್​' ಎಂಬ ಟೀಕೆಗಳೂ ಎದುರಾಗಿವೆ. ಅತ್ಯಂತ ಫಿಟ್​ ಕ್ರೀಡಾಪಟು ಎನಿಸಿರುವ ಕೊಹ್ಲಿ ಸಾಧಾರಣ ನೀರು ಕುಡಿದ ಮಾತ್ರಕ್ಕೆ ಈ ರೀತಿ ಬಳಲಿ ಬೆಂಡಾಗಿರುವುದು ಅಚ್ಚರಿಗೂ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net