ಎಂಸಿಜಿಯಲ್ಲಿ ಮತ್ತೊಮ್ಮೆ ಕಹಿ ಅನುಭವ; ಅಭಿಮಾನಿಗಳೊಂದಿಗೆ Virat Kohli ವಾಗ್ವಾದದ ವಿಡಿಯೋ ವೈರಲ್

Virat Kohli
Published on

ಮೆಲ್ಬೋರ್ನ್​: ಮೆಲ್ಬೋರ್ನ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್​-ಗವಾಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡವು ನೀರಸ ಪ್ರದರ್ಶನ ತೋರಿದ್ದು, ಪಾಲೋಆನ್​ ಭೀತಿ ಎದುರಿಸುತ್ತಿದೆ. ಇನ್ನೂ ಬಾಕ್ಸಿಂಗ್​ ಡೇ ಟೆಸ್ಟ್​ ಪಂದ್ಯವು ಹಲವು ಘಟನೆಗಳು ನಡೆದಿದ್ದು, ಪ್ರಮುಖವಾಗಿ ವಿರಾಟ್​ ಕೊಹ್ಲಿ (Virat Kohli) ವಿವಾದದ ಕೇಂದ್ರಬಿಂದುವಾಗಿದ್ದಾರೆ.

ಮೊದಲ ದಿನದಾಟದ ವೇಳೆ ಆಸ್ಟ್ರೇಲಿಯಾದ ಯುವ ಆಟಗಾರ ಸ್ಯಾಮ್ ಕೊನ್‌ಸ್ಟಸ್ ಅವರೊಂದಿಗೆ ಭುಜಬಲದ ಕಾಳಗ ನಡೆಸಿ ದಂಡನೆಗೆ ಒಳಗಾಗಿದ್ದ ವಿರಾಟ್​ ಕೊಹ್ಲಿಗೆ (Virat Kohli) ಇದೀಗ ಮೆಲ್ಬೋರ್ನ್​ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ಕಹಿ ಅನುಭವವಾಗಿದ್ದು, ಅಭಿಮಾನಿಗಳೊಂದಿಗೆ ವಾಗ್ವಾದ ನಡೆಸಿರುವ ಘಟನೆ ನಡೆದಿದೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಅಭಿಮಾನಿಗಳು ಕೊಹ್ಲಿ ಅವರನ್ನು ಗೇಲಿ ಮಾಡುವ ಮೂಲಕ ನಿರಂತರವಾಗಿ ಛೇಡಿಸಿದ್ದಾರೆ. ಕೊಹ್ಲಿ ಏಕಾಗ್ರತೆಗೆ ಭಂಗವನ್ನುಂಟು ಮಾಡುವ ಪ್ರೇಕ್ಷಕರ ಯತ್ನವು ಯಶಸ್ವಿಯಾಗಿದೆ. ಇದರ ಪರಿಣಾಮ ಎರಡನೇ ದಿನದಾಟದ ಕೊನೆಯ ಅವಧಿಯಲ್ಲಿ ಔಟ್ ಆಗಿ ಪೆವಿಲಿಯನ್‌ನತ್ತ ತೆರಳುತ್ತಿದ್ದ ವೇಳೆ ಕೊಹ್ಲಿ ತಮ್ಮನ್ನು ಗೇಲಿ ಮಾಡುತ್ತಿದ್ದ ಫ್ಯಾನ್ಸ್​ ಜತೆ ವಿರಾಟ್​ ಕೊಹ್ಲಿ (Virat Kohli) ವಾಗ್ವಾದ ನಡೆಸಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್​ನ ಮೊದಲ ದಿನದಾಟದ ವೇಳೆ ಕಾನ್ಸ್ಟಾಸ್​ ವಿರಾಟ್​ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಘಟನೆ ಸಂಬಂಧ ಮ್ಯಾಚ್​ ರೆಫ್ರಿ ವಿರಾಟ್​ ಕೊಹ್ಲಿಗೆ ಪಂದ್ಯದ ಶುಲ್ಕ ಶೇ. 20ರಷ್ಟು ದಂಡ ವಿಧಿಸಿದ್ದು, ಒಂದು ಡಿಮೆರಿಟ್ ಪಾಯಿಂಟ್ ನೀಡಿದ್ದರು. ಇದೀಗ ಮತ್ತೊಮ್ಮೆ ಕೊಹ್ಲಿ ಫ್ಯಾನ್ಸ್​ ಜತೆ ವಾಗ್ವಾದ ನಡೆಸಿದ್ದು, ಮುಂದಿನ ದಿನಗಳಲ್ಲಿ ಇದು ಮುಳುವಾಗುವ ಸಾಧ್ಯತೆ ಇದೆ.

https://www.vijayavani.net/late-collapse-puts-team-india-on-back-foot-heading-into-day-3-hopes-pinned-on-rishabh-pant

https://www.vijayavani.net/economist-rbi-governor-finance-minister-pm-manmohan-singh-wore-many-hats

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net