ಐಪಿಎಲ್​ನಲ್ಲಿ ತಮ್ಮ ನೆಚ್ಚಿನ ಎದುರಾಳಿ ತಂಡವನ್ನು ಹೆಸರಿಸಿದ ವಿರಾಟ್; ನೀಡಿದ ಕಾರಣ ಹೀಗಿದೆ

Virat Kohli
Published on

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ನಾಯಕ, ರನ್​ ಮೆಷಿನ್​, ಚೇಸಿಂಗ್​ ಕಿಂಗ್​ ಎಂದೇ ಖ್ಯಾತಿ ಪಡೆದಿರುವ ವಿರಾಟ್​ ಕೊಹ್ಲಿ ಭಾರತ ಕ್ರಿಕೆಟ್​ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂದರೆ ತಪ್ಪಾಗಲಾರದು. 2008ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ವಿರಾಟ್​ ತಮ್ಮ ಅಮೋಘ ಬ್ಯಾಟಿಂಗ್​ ಪ್ರದರ್ಶನದ ಮೂಲಕವೇ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ರಾಷ್ಟ್ರೀಯ ತಂಡದ ಹೊರತಾಗಿ ಐಪಿಎಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಭಾಗವಾಗಿರುವ ವಿರಾಟ್​ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ.

2008ರಲ್ಲಿ 19 ವರ್ಷದ ಯುವ ಬ್ಯಾಟ್ಸ್​ಮನ್​ ಆಗಿ ಅವರು ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದರು. ಕಳೆದ 16 ವರ್ಷಗಳಲ್ಲಿ ಭಾರತ ತಂಡದ ಪರ ಮೂರೂ ಪ್ರಕಾರಗಳಲ್ಲಿ ಒಟ್ಟು 533 ಪಂದ್ಯ ಆಡಿರುವ ಕೊಹ್ಲಿ, ಸುಮಾರು 27 ಸಾವಿರ ರನ್​ ಬಾರಿಸಿದ್ದಾರೆ. ಹಲವರುಇ ದಾಖಲೆಗಳನ್ನು ಹೊಂದಿರುವ ವಿರಾಟ್​ ಕೊಹ್ಲಿ ಐಪಿಎಲ್​ನಲ್ಲಿ ತಮ್ಮ ಬದ್ಧವೈರಿ ತಂಡದ ಹೆಸರನ್ನು ಹೇಳಿದ್ದು, ಈ ಸುದ್ದಿ ಸಖತ್​ ಸೌಂಡ್​ ಮಾಡುತ್ತಿದೆ.

ಈ ಹಿಂದೆ ಖಾಸಗಿ ಸುದ್ದಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಆ್ಯಂಕರ್​ ವಿರಾಟ್​ಗೆ ಐಪಿಎಲ್​ನಲ್ಲಿ ಯಾವ ತಂಡವನ್ನು ನೀವು ವೈರಿಗಳಂತೆ ಕಾಣುತ್ತೀರಾ ಎಂದು ಮುಂಬೈ ಅಥವಾ ಕಲ್ಕತ್ತಾನಾ ಎಂದು ಪ್ರಶ್ನಿಸಿದ್ದಾರ. ಇದಕ್ಕೆ ನಗುತ್ತಲೇ ಉತ್ತರಿಸಿದ ವಿರಾಟ್​ ಮೂರು ಬಾರಿಯ ಚಾಂಪಿಯನ್ಸ್​ ಕಲ್ಕತ್ತಾ ನೈಟ್​ರೈಡರ್ಸ್​​ ತಂಡದ ಹೆಸರನ್ನು ಹೇಳಿದ್ದಾರೆ. ಆದರೆ, ಕಾರಣವನ್ನು ಉಲ್ಲೇಖಿಸಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವಿರಾಟ್​ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪ್ರಸ್ತುತು ಟೀಮ್​ ಇಂಡಿಯಾದ ಹೆಡ್​ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿರುವ ಗೌತಮ್​ ಗಂಭೀರ್​ ಅವರೊಟ್ಟಿಗೆ 31.80 ರ ಸರಾಸರಿಯಲ್ಲಿ 159 ರನ್​ ಗಳಿಸಿದ್ದರು. ಆ ಬಳಿಕ ವಿರಾಟ್​ ಭಾರತ ತಂಡಕ್ಕೆ ಅಸಾಧಾರಣ ಬ್ಯಾಟಿಂಗ್ ಶಕ್ತಿಯಾಗಿ ಹೊರಹೊಮ್ಮಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net