ಆರ್‌ಸಿಬಿ ಆಟಗಾರರೊಂದಿಗೆ ಪಿಕಲ್ ಬಾಲ್ ಆಡಿದ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ| Pickleball

virat
Published on

ಲಕ್ನೋದಲ್ಲಿ ಎಸ್‌ಆರ್‌ಹೆಚ್ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ RCB ತಂಡದ ಬಾಂಡಿಂಗ್ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪಿಕಲ್‌ಬಾಲ್ ಆಡಿ ಸಂಭ್ರಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಆಟಗಾರರು ತಮ್ಮ ಸಹಾಯಕ ಸಿಬ್ಬಂದಿ ಮತ್ತು ಕುಟುಂಬಗಳೊಂದಿಗೆ ಪಿಕಲ್‌ಬಾಲ್‌ ಆಡುವ ಮೂಲಕ ದಂಪತಿಗಳು ಎಂಜಾಯ್​ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಒಟ್ಟಿಗೆ ಆಡಿದ ಈ ಪಿಕಲ್‌ಬಾಲ್ ಆಟ ಗಮನಸೆಳೆದಿದ್ದು, ಈ ವಿಡಿಯೊವನ್ನು ಆರ್‌ಸಿಬಿ ಫ್ರಾಂಚೈಸಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ್ ಬಳಿಕ ಪಾಕಿಸ್ತಾನ ಸಂಪೂರ್ಣವಾಗಿ ಬಹಿರಂಗಗೊಂಡಿದೆ: ಭಾರತೀಯ ಸಶಸ್ತ್ರ ಪಡೆಗಳಿಗೆ ಅಮಿತ್ ಶಾ ಶ್ಲಾಘನೆ| Amith shah

ಮೇ 17ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಕೆಕೆಆರ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ರದ್ದಾಗಿದ್ದ ಐಪಿಎಲ್ ಅಧಿಕೃತವಾಗಿ ಪುನರಾರಂಭಗೊಂಡಿತ್ತು. ಮೇ 18ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿರುದ್ಧ ಗುಜರಾತ್ ಟೈಟಾನ್ಸ್ ಜಯ ಸಾಧಿಸಿದ್ದರಿಂದ ಆರ್‌ಸಿಬಿ ಪ್ಲೇ-ಆಫ್‌ಗೆ ಅರ್ಹತೆ ಪಡೆಯಲು ಸಹಾಯವಾಯಿತು.

ಫಿಲ್‌ ಸಾಲ್ಟ್‌ ಸಾರಥ್ಯದಲ್ಲಿ ನಡೆದ ಈ ಪಿಕಲ್‌ಬಾಲ್ ಟೂರ್ನಿಯಲ್ಲಿ ಮಯಾಂಕ್‌ ಅಗರ್ವಾಲ್‌, ಜಿತೇಶ್‌ ಶರ್ಮ, ಕೋಚ್‌ ಆ್ಯಂಡಿ ಫ್ಲವರ್‌, ದಿನೇಶ್‌ ಕಾರ್ತಿಕ್‌ ಮತ್ತು ಅವರ ಪತ್ನಿ ದೀಪಿಕಾ ಪಳ್ಳಿಕಲ್‌ ಸೇರಿ ಹಲವರು ಇಬ್ಬರು ಆಟಗಾರರ ತಂಡವಾಗಿ ಪಂದ್ಯಗಳನ್ನು ಆಡಿದರು. ಕೊಹ್ಲಿ ಮತ್ತು ಅನುಷ್ಕಾ ಜೋಡಿ ಲೀಗ್‌ ಹಂತದಲ್ಲೇ ಸೋತರು. ಆ್ಯಂಡಿ ಫ್ಲವರ್‌ ಮತ್ತು ದೀಪಿಕಾ ಪಳ್ಳಿಕಲ್‌ ಜೋಡಿ ಪಂದ್ಯದಲ್ಲಿ ಚಾಂಪಿಯನ್‌ ಆದರು. ವಿಜೇತರಿಗೆ ಟಿವಿಯನ್ನು ನೀಡಲಾಯಿತು.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net