ದ.ಆಫ್ರಿಕಾ ವಿರುದ್ಧ 'ರನ್​ ಮಷಿನ್' ಅರ್ಧಶತಕ​! ಕಡೆಗೂ ಈಡೇರಿತು ಅಭಿಮಾನಿಗಳ ಬಹುದಿನದ ಆಸೆ

Untitled design - 2024-06-29T205655.242
Published on

ಬಾರ್ಬಡೋಸ್​: ಇಲ್ಲಿನ ಕೆನ್ಸಿಂಗ್ಟನ್ ಓವಲ್​ನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಭಾರೀ ಪೈಪೋಟಿಗೆ ಇಳಿದಿದ್ದು, ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾಗೆ ಬೌಲಿಂಗ್ ಮಾಡುವಂತೆ ತಿಳಿಸಿತು. ಆರಂಭದಲ್ಲೇ ಕ್ಯಾಪ್ಟನ್ ರೋಹಿತ್ ಶರ್ಮ, ರಿಷಭ್ ಪಂತ್​ ಮತ್ತು ಸೂರ್ಯಕುಮಾರ್ ಯಾದವ್​ ವಿಕೆಟ್ ಕಳೆದುಕೊಂಡ ಭಾರತ, ಭಾರೀ ಸಂಕಷ್ಟಕ್ಕೆ ಸಿಲುಕಿತು. ಐದು ಓವರ್​ ಅಂತ್ಯಕ್ಕೆ ಮೂರು ವಿಕೆಟ್​ ಪತನಗೊಂಡಿದ್ದು, ಟೀಮ್ ಇಂಡಿಯಾ ಅಭಿಮಾನಿಗಳಿಗೆ ಭಾರೀ ಬೇಸರ ತಂದೊಡ್ಡಿತು.

ಇನ್ನು ಈ ಮಧ್ಯೆ ಏಕಾಂಗಿ ಹೋರಾಟ ನಡೆಸಿದ ವಿರಾಟ್​ ಕೊಹ್ಲಿ (49 ಎಸೆತಗಳಲ್ಲಿ 56*) ಆಕರ್ಷಕ ಅರ್ಧಶತಕ ಸಿಡಿಸಿ, ತಂಡಕ್ಕೆ ಆಸರೆಯಾದರು. ಆಲ್​ರೌಂಡರ್​ ಅಕ್ಸರ್​ ಪಟೇಲ್ ಮತ್ತು ವಿರಾಟ್ ಪವರ್​ಫುಲ್​​ ಜತೆಯಾಟ ಭಾರತಕ್ಕೆ ಹೆಚ್ಚುವರಿ ರನ್​ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net