VIDEO | ಆಸೀಸ್ ವಿರುದ್ಧ ಟೆಸ್ಟ್ ಸರಣಿಯ ಸಿದ್ಧತೆಗೆ ಭಾರತ ತಂಡ ಆದ್ಯತೆ

team practice web
Published on

ಸಿಡ್ನಿ: ಆಸೀಸ್ ಪ್ರವಾಸದಲ್ಲಿ ಮೊದಲಿಗೆ ಸೀಮಿತ ಓವರ್ ಸರಣಿ ನಡೆಯಲಿದ್ದರೂ, ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡದ ಸದ್ಯದ ಗಮನವೆಲ್ಲ ಟೆಸ್ಟ್ ಸರಣಿಯ ಮೇಲಿದೆ. ಮಂಗಳವಾರ ಸಿಡ್ನಿಯಲ್ಲಿ ಭಾರತ ತಂಡದ ಆಟಗಾರರು ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಕೆಂಪು ಮತ್ತು ಪಿಂಕ್ ಚೆಂಡುಗಳಲ್ಲೇ ಅಭ್ಯಾಸ ನಡೆಸಿದರು.

ವೇಗಿಗಳಾದ ಮೊಹಮದ್ ಶಮಿ ಮತ್ತು ಮೊಹಮದ್ ಸಿರಾಜ್ ಎಸೆತಗಳನ್ನು ಎದುರಿಸುತ್ತಿರುವ ವಿಡಿಯೋವನ್ನು ಕೊಹ್ಲಿ ಟ್ವಿಟರ್‌ನಲ್ಲಿ ಪ್ರಕಟಿಸಿದ್ದು, ‘ಲವ್ ಟೆಸ್ಟ್ ಕ್ರಿಕೆಟ್ ಸೆಷನ್ಸ್’ ಎಂದು ಬರೆದುಕೊಂಡಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ ಪಿಂಕ್ ಬಾಲ್‌ನಲ್ಲಿ ಅಭ್ಯಾಸ ನಡೆಸಿದ್ದು, ಅವರು ಅಹರ್ನಿಶಿಯಾಗಿ ನಡೆಯಲಿರುವ ಮೊದಲ ಟೆಸ್ಟನಲ್ಲಿ ಆಡುವ ನಿರೀಕ್ಷೆ ಹೆಚ್ಚಾಗಿದೆ.

ಕಳೆದ 2 ತಿಂಗಳಿನಿಂದ ಯುಎಇಯ ನಿಧಾನಗತಿಯ ಪಿಚ್‌ನಲ್ಲಿ ಆಡಿದ್ದರಿಂದ ಆಸ್ಟ್ರೇಲಿಯಾದ ಬೌನ್ಸಿ ಪಿಚ್‌ಗಳಿಗೆ ಹೊಂದಿಕೊಳ್ಳುವ ಸಲುವಾಗಿ ಭಾರತ ತಂಡದ ಆಟಗಾರರು ಸೋಮವಾರ ಟೆನಿಸ್ ಬಾಲ್‌ನಲ್ಲಿ ಅಭ್ಯಾಸ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net