

ಮುಂಬೈ: ಮೊಹಮ್ಮದ್ ಶಮಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದ್ದಾರೆ. ಅವರು ವೈರಲ್ ಆಗಲು ಕಾರಣ ಇತ್ತೀಚೆಗೆ ಭಾರತದ ರಾಷ್ಟ್ರಪತಿಗಳಿಂದ ಪಡೆದ ಅರ್ಜುನ ಪ್ರಶಸ್ತಿ. ಮೊಹಮ್ಮದ್ ಶಮಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಶಂಸಿಸುತ್ತಿದ್ದು, ಇದೇ ಸಮಯದಲ್ಲಿ, ಜನರನ್ನು ಪ್ರೇರೇಪಿಸುವ ಮೀಮ್‌ಗಳು ಸಹ ವೈರಲ್ ಆಗುತ್ತಿವೆ. ಆದರೆ ಅವರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದರ ಹಿಂದೆ ಇನ್ನೊಂದು ಕಾರಣವಿದ್ದು, ಮುಂದೆ ಓದಿ...
ವಿಡಿಯೋದಲ್ಲಿ ಏನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕ್ಯಾಪ್ ಮತ್ತು ಜಾಕೆಟ್ ಧರಿಸಿರುವ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದು, ಅನೇಕರನ್ನು ಗೊಂದಲಕ್ಕೀಡು ಮಾಡಿದೆ. ಈ ವ್ಯಕ್ತಿಯನ್ನು ದೂರದಿಂದ ನೋಡಿದರೆ ಭಾರತ ತಂಡದ ಬೌಲರ್ ಮೊಹಮ್ಮದ್ ಶಮಿ ತರಹ ಕಾಣುತ್ತಾರೆ. ಆದರೆ ಅವರು ಮೊಹಮ್ಮದ್ ಶಮಿ ಅಲ್ಲ, ಈ ವಿಡಿಯೋ ನೋಡಿದಾಗ, ವಿಡಿಯೋ ಮಾಡುವ ವ್ಯಕ್ತಿಯು ಬೌಲಿಂಗ್ ಮಾಡಲು ಕೇಳುತ್ತಾನೆ. ನಂತರ ಅವರು ಮೊಹಮ್ಮದ್ ಶಮಿ ಶೈಲಿಯಲ್ಲಿ ಬೌಲಿಂಗ್ ಅನ್ನು ಅನುಕರಿಸುತ್ತಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.
ಇಲ್ಲಿದೆ ನೋಡಿ ವೈರಲ್ ವಿಡಿಯೋ
ತಮಾಷೆಯಾಗಿ ಕಾಮೆಂಟ್‌ಗಳನ್ನು ಮಾಡಿದ ಜನರು
ಈ ವಿಡಿಯೋವನ್ನು ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ X (ಹಿಂದಿನ Twitter) ನಲ್ಲಿ @RVCJ_FB ಹೆಸರಿನ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ. ಸುದ್ದಿ ಬರೆಯುವವರೆಗೂ 98 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋ ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ಬಳಕೆದಾರರು "ಒಂದೇ ತರಹ ಕಾಣುತ್ತಾರೆ, ವರ್ತನೆಗಳೂ ಹಾಗೆ ಇದೆ" ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.